ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ ಅವರ ಕೃತಿ-ಯೋಧ ನಮನ. ಯೋಧರ ವೀರಗಾಥೆಗಳ ಸಂಕಲನ ಎಂಬುದು ಕೃತಿಯ ಉಪಶೀರ್ಷಿಕೆ. ದೇಶಕ್ಕಾಗಿ ಹೋರಾಡಿದ ಧೀರರ ರೋಮಾಂಚಕಾರಿ ಸಂಗತಿಗಳನ್ನು ಕಟ್ಟಿಕೊಟ್ಟ ಕೃತಿ ಇದು. ಭಾರತದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮ ಬಂದೋಪಾಧ್ಯಾಯ, ಮಾಣಿಕ್ ಷಾ ಅಜಿತ್ ದೇವೊಲ್, ಅಭಿನಂದನ್, ಇಸ್ರೇಲ್ ಪ್ರಧಾನಿ ಬೆಂಬಮಿನ್ ನತನ್ಯಾಹು ಅವರ ಸಹೋದರ ನ ಸಾಹಸದ ಚಿತ್ರಣ ನೀಡಲಾಗಿದೆ. ಕನ್ನಡಿಗ ಲ್ಯಾನ್ಸ್ ನಾಯಕ್ ಹನುಮಂತ ಕೊಪ್ಪದ್ ಅವರ ಸಾಹಸಮಯ ಪರಿಚಯವಿದೆ. ಕಾರ್ಗಿಲ್ ಸನ್ನಿವೇಶ, ಮೈಸೂರಿನ ಅಶ್ವ ದಳದ ಸಾಹಸ...ಹೀಗೆ ದೇಶದ ಸುರಕ್ಷತೆಗಾಗಿ ಪ್ರಾಣದ ಹಂಗು ತೊರೆದು ಹೋರಾಡುವ ವೈವಿಧ್ಯಮಯ ರೋಮಾಂಚಕ ಮಾಹಿತಿಗಳನ್ನು ಈ ಕೃತಿ ಒಳಗೊಂಡಿದೆ.
ವಿಂಗ್ ಕಮಾಂಡರ್ ಸುದರ್ಶನರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಗಂಗೂರು ಎನ್ನುವ ಪುಟ್ಟ ಹಳ್ಳಿಯಲ್ಲಿ. ಉಪಾಧ್ಯಾಯರಾಗಿದ್ದ ತಂದೆಯವರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ದಾವಣಗೆರೆಯಲ್ಲಿ ಪಿಯುಸಿ ಮುಗಿಸಿದ ನಂತರ ವಾಯುಸೇನೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಆಯ್ಕೆಯಾದರು. ದೇಶ ಸುತ್ತು ಕೋಶ ಓದು ಎನ್ನುವಂತೆ ವಾಯುಸೇನೆಯಲ್ಲಿ ಭಾರತದಲ್ಲಿ ಇವರು ಸುತ್ತದ ಪ್ರದೇಶಗಳಿಲ್ಲ, ಅಂತೆಯೇ ಕೋಶವನ್ನು ಓದುತ್ತಲೇ ಇವರು ತಮ್ಮ ವೃತ್ತಿವಲಯದಲ್ಲಿ ಹಂತಹಂತವಾಗಿ ಮೇಲೇರುತ್ತಾ ವಾಯುಸೇನೆಯಲ್ಲಿ ಪೈಲಟ್ ಆಗಿ ಮುಂದುವರೆದರು. ವೈಮಾನಿಕ ಜೀವನದಲ್ಲಿ ಇವರು ಸುಮಾರು ಹದಿನಾಲ್ಕು ವಿವಿಧ ರೀತಿಯ, ಗಾತ್ರದ ವಿಮಾನಗಳನ್ನು ಹಾರಿಸುತ್ತಾ ಹನ್ನೆರಡು ಸಾವಿರ ಗಂಟೆಗಳಿಗೂ ...
READ MORE