'ಆಸರೆಯಾದವರು' ಪ್ರೊ ಬಿ ಆರ್ ಅಣ್ಣಾಸಾಗರ ಮತ್ತು ಲಿಂಗಾರೆಡ್ಡಿ ಶೇರಿ ಅವರು ನಡೆಸುವ ಸಮಸಾಹಿತ್ಯ ವೇದಿಕೆಯ ಅಡಿ ಸಂಪಾದಿತ ಕೃತಿಯಾಗಿದೆ. ಹತ್ತು ಲೇಖಕರ ಒಟ್ಟು ಲೇಖನಗಳಿವೆ. ಪುಸ್ತಕದಲ್ಲಿ ಸಮಸಾಹಿತ್ಯ ವೇದಿಕೆಯ ಅಧ್ಯಕ್ಷರ ನುಡಿ, ಸಂಚಾಲಕರ ಮತ್ತು ಸಂಪಾದಕರ ಮಾತೂ ಇವೆ. ಸಾಮಾನ್ಯರಿಗೆ ಪರಿಚಯವಿಲ್ಲದ, ಸಾಧಕರ ಜೀವನ ಚಿತ್ರಣ ಇದೆ. ಮೇಡಂ ಕಾಮಾ, ಶೋಭಿರಾಂ, ಸತ್ಯಾರ್ಥಿ, ಸಾವಿತ್ರಿಬಾಯಿ ಫುಲೆ, ಸಾಹು ಮಹಾರಾಜ್, ಬಾಬು ಜಗಜೀವನ, ಗೋವಿಂದ ವಲ್ಲಭ ಪಂತ ಇತ್ಯಾದಿ ಮಹನೀಯರ ಜೀವನ ಚರಿತ್ರೆಗಳ ವೃತ್ತಾಂತವನ್ನು ಕಟ್ಟಿಕೊಡಲಾಗಿದೆ.
ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರು ಮೂಲತಃ ಯಾದಗಿರಿ ಜಿಲ್ಲೆಯ ಗುರುಮಠಕಲ್ ನಿವಾಸಿ. ಅಲ್ಲಿಯೇ ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ್ದಾರೆ. ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್, ಆಂಧ್ರಪ್ರದೇಶದ ಕುಪ್ಪಂನಲ್ಲಿಯ ದ್ರಾವಿಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಹಾಗೂ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯನಿಂದ ಬಿ.ಸಿ.ಜೆ; ಪಿ.ಜಿ.ಡಿ.ಇ.ಇ.ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಸೇಡಂ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದು, ದೂರದರ್ಶನದಲ್ಲೂ ಉಪನ್ಯಾಸಗಳನ್ನು ನೀಡಿದ್ದಾರೆ. ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಹಲವು ಚಿಂತನ, ...
READ MORE