ಡಾ. ಪಿ.ವಿ. ನಾರಾಯಣ ಅವರ ಕೃತಿ-ಸಾಹಿತ್ಯ ಸಡಗರ. ಈ ಕೃತಿಯಲ್ಲಿ ಡಿವಿಜಿ, ಕುವೆಂಪು, ರಾಜರತ್ನಂ, ಕೆ.ಎಸ್. ನಿಸಾರ ಅಹಮ್ಮದ್, ಜಿ.ಎಸ್. ಶಿವರುದ್ರಪ್ಪ, ಕೆ.ವಿ. ಅಯ್ಯರ್, ಜಿ.ಎಸ್. ಸಿದ್ಧಲಿಂಗಯ್ಯ ಸೇರಿದಂತೆ ಕನ್ನಡದ ಕಟ್ಟಾಳುಗಳ ಸಾಹಿತ್ಯದ ಸಾಧನೆ ಹಾಗೂ ಅವರ ಬದುಕಿನ ಘನತೆಯನ್ನು ಎತ್ತಿ ಹಿಡಿಯುವ ಭಾಗವಾಗಿ ಇಲ್ಲಿಯ ಬರಹಗಳಿವೆ. ಈ ಎಲ್ಲ ವ್ಯಕ್ತಿ ಚಿತ್ರಣಗಳ ಭಾಷೆಯು ಸರಳವಾಗಿದ್ದು, ಮಕ್ಕಳೂ ಸಹ ಓದಬಹುದು. ಈ ಕೃತಿಯ ಮೂಲಕ ಕನ್ನಡದ ಘನತೆ, ಕನ್ನಡ ಸಾಹಿತ್ಯದ ಎತ್ತರವನ್ನು ಸೂಚಿಸಿದ್ದು, ಸಾಹಿತ್ಯ ದಿಗ್ಗಜರ ಪರಿಚಯಾತ್ಮಕ ಕೃತಿ ಇದು.
ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...
READ MORE