ವ್ಯಕ್ತಿ ಸಂಸ್ಕೃತಿ ಚಿತ್ರಣಗಳ ಹೂರಣವನ್ನು ತೆರೆದಿಡುವ ಕೃತಿ ಲೇಖಕ ನಾ. ಮೊಗಸಾಲೆ ಅವರ ‘ಹೂ ಬಿಸಿಲಿನ ಕೆಳಗೆ’. ಸುದೀರ್ಘ ಬದುಕಿನಲ್ಲಿ ತಮ್ಮ ಒಡನಾಟಕ್ಕೆ ಬಂದ ಹಿರಿಕಿರಿಯ ಮಿತ್ರರ ವ್ಯಕ್ತಿಗಳ ದಾಖಲೆ ಈ ಕೃತಿಯಲ್ಲಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ರಾಜ್ಯದ ವಿವಿಧ ಭಾಗಗಳ ಆಯ್ದ ವ್ಯಕ್ತಿಗಳ ವ್ಯಕ್ತಿತ್ವವನ್ನು ಹಾಗೂ ವೈಯುಕ್ತಿಕ ಸ್ನೇಹವನ್ನ ಈ ಕೃತಿಯಲ್ಲಿ ನಾ. ಮೊಗಸಾಲೆ ಅವರು ದಾಖಲಿಸಿದ್ದಾರೆ. ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯವನ್ನು ಕೃತಿಯ ಮುಖೇನ ಅರಿಯಬಹುದಾಗಿದ್ದು, ವಿವಿಧ ಅಭಿನಂದನಾ ಗ್ರಂಥ ಹಾಗೂ ಸಂಸ್ಮರಣಾ ಗ್ರಂಥಗಳಿಗೆ ಬರೆದ ಲೇಖನಗಳನ್ನು ಒಟ್ಟಾಗಿಸಿ, 49 ವ್ಯಕ್ತಿಗಳ ವ್ಯಕ್ತಿ ಸಂಸ್ಕೃತಿ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ಈಗ ಇರುವವರು, ಇಲ್ಲದೇ ಇರುವವರು, ಅಪರೂಪದ ವ್ಯಕ್ತಿಗಳು, ಪರಿಚಯವೇ ಇಲ್ಲದವರು, ಉತ್ತಮ ಕಾರ್ಯದ ಹಿಂದಿರುವ ಉದ್ಯಮಿ ದಾನಿಗಳ ಪರಿಚಯವನ್ನು ಇಲ್ಲಿ ಕಾಣಬಹುದಾಗಿದೆ.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE