ವ್ಯಾಸರಾಯ ಬಲ್ಲಾಳರಿಗೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನಮಾನವಿದೆ. ಕನ್ನಡ, ಇಂಗ್ಲಿಷ್, ಹಿಂದಿ , ಮರಾಠಿ, ತುಳು ಹೀಗೆ ಬಹುಭಾಷೆಗಳ ಪರಿಣತಿಯನ್ನು ಸಾಧಿಸಿ ಸಾಂಸ್ಕೃತಿಕ ರಾಯಭಾರಿಯಾಗಿ ಜನಾನುರಾಗಿಯಾದವರು ‘ವ್ಯಾಸರಾಯ ಬಲ್ಲಾಳ’ರು. ಇವರ ಕಾದಂಬರಿ, ಕಥಾಸಂಕಲನ ಸೇರಿದಂತೆ ಇತರ ಕೃತಿಗಳ ನೋಟವನ್ನು ತೆರೆದಿಡುವ ಕೃತಿಯೇ ಲೇಖಕ ಜಿ.ಎನ್. ಉಪಾಧ್ಯ ಬರೆದಿರುವ ‘ವಾಸ್ತವವಾದಿ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ’. ಇಲ್ಲಿ ವ್ಯಾಸರರಾಯ ಬಲ್ಲಾಳರನ್ನು ಒರ್ವ ಕಾದಂಬರಿಕಾರರಾಗಿ, ಅನುರಕ್ತೆ, ಹೇಮಂತಗಾನ, ವಾತ್ಸಲ್ಯ ಪಥ, ಉತ್ತರಾಯಣ, ಬಂಡಾಯ, ಆಕಾಶಕ್ಕೊಂದು ಕಂದೀಲು, ಹೆಜ್ಜೆ, ಹೆಜ್ಜೆಗುರುತು ನೋಟದಲ್ಲಿ ವಿಚಾರವನ್ನು ಕಟ್ಟಿಕೊಟ್ಟರೆ, ಕಥೆಗಾರರಾಗಿ, ಬಲ್ಲಾಳರ ಕತೆಗಳ ಅನನ್ಯತೆ, ಬಲ್ಲಾಳರ ಗದ್ಯಸಾಹಿತ್ಯ, ಕಟ್ಟುವೆವು ನಾವು(1996), ಸ್ವಾತಂತ್ಯ್ರಕ್ಕೆ ಐವತ್ತು ವರ್ಷ(1998), ವಿಚಾರ ರಶ್ಮಿ(2004), ಆಧುನಿಕ ಸಾಹಿತ್ಯ ಮೀಮಾಂಸೆ(2003), ಕಲಾವಿದರ ಹೆಬ್ಬಾರರ ರೇಖಾ ಲಾವಣ್ಯ(1999), ಮುಂಬಯಿ ದಿನಾಂಕ(2003), ನಾನೊಬ್ಬ ಭಾರತೀಯ ಪ್ರವಾಸಿ (1987), ಸಂಗ್ರಹ ಭಾರತಾಯಣ(1984), ಹೀಗೆ ಹಲವಾರು ಅಧ್ಯಾಯಗಳಲ್ಲಿ ಅವರ ಬದುಕಿನ ಚಿತ್ರಣ ಹಾಗೂ ಅವರ ಸಾಹಿತ್ಯದ ರೂಪು ರೇಷೆಗಳನ್ನು ನೀಡಲಾಗಿದೆ. “ಬದುಕನ್ನು ಅದರ ಸಮಗ್ರತೆಯಲ್ಲಿ ಗ್ರಹಿಸುವ ಎಲ್ಲಾ ಕಲಾಕೃತಿಗಳಲ್ಲೂ ಒಂದಲ್ಲ ಒಂದು ರೀತಿಯ ಜೀವನ ದರ್ಶನವನ್ನು ಕಾಣಬೇಕು” ಎಂಬ ನಿಲುವನ್ನು ಅವರು ಎಂದಿಗೂ ನೆಚ್ಚಿಕೊಂಡವರು ಅಲ್ಲಾ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಜನ ಸಾಮಾನ್ಯರ ಬದುಕಿನ ವಿಭಿನ್ನ ನೆಲೆಗಳನ್ನು ಸಾಹಿತ್ಯದೊಳಗೆ ತಂದು ಚರ್ಚಿಸಿದ ಬಲ್ಲಾಳರು ಪ್ರಗತಿಶೀಲ ಚಿಂತಕರಾಗಿ, ಸಾಹಿತಿಯಾಗಿ ಮುಖ್ಯರಾಗುತ್ತಾರೆ. ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿಗೆ ಕಾರಣಗಳನ್ನು ಶೋಧಿಸುವ ಕೆಲಸ ಅವರ ಕೃತಿಗಳಲ್ಲಿ ನಿಚ್ಚಳವಾಗಿ ನಡೆದಿದೆ.
ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...
READ MORE