ಅಮೆರಿಕನ್ನಡ ಬರಹಗಾರರು-ಈ ಕೃತಿಯನ್ನು ಲೇಖಕ ಅಹಿತಾನಲ (ನಾಗ ಐತಾಳ) ಅವರು ರಚಿಸಿದ್ದು, ಅಮೆರಿಕದಲ್ಲಾಗುವ ಸಾಹಿತ್ಯ ಬೆಳವಣಿಗೆಯ ಕುರಿತು ಕರ್ನಾಟಕದ ಜನತೆಗೆ ಹೆಚ್ಚಿನ ಅರಿವು ಮಾಡಿಕೊಡುವ ಉದ್ದೇಶ ಹೊಂದಿದೆ. ಅಮೆರಿಕೆಗೆ ಹೋದ ಕನ್ನಡಿಗರ ಸಾಹಿತ್ಯ-ಕಲೆ ಸೇರಿದಂತೆ ಇತರೆ ಚಟುವಟಿಕೆಗಳು, ಅವರ ಸಾಹಿತ್ಯ-ಕಲಾ ಪ್ರತಿಭೆಗೆ ಅಮೆರಿಕೆಯಲ್ಲಿ ಸೃಷ್ಟಿಸಿದ ವೇದಿಕೆ, ಕನ್ನಡ ಕೂಟಗಳು ಇತ್ಯಾದಿ ಕರ್ನಾಟಕದ ವಿವಿಧ ಪತ್ರಿಕೆಗಳಲ್ಲೂ ಆ ಮಾಹಿತಿ ಪ್ರಕಟಿಸುವ ಹೊಣೆಗಾರಿಕೆ ಹೊತ್ತಿರುವ ಲೇಖಕರು, ಅಮೆರಿಕೆಯ ಕನ್ನಡ ಲೇಖಕರ ಕೃತಿಗಳನ್ನು ಪರಿಚಯಿಸಿದ್ದಾರೆ. ದೂರದಲ್ಲಿದ್ದೂ ಕನ್ನಡ ಸಾಹಿತ್ಯ ಸೇವೆ ಸಲ್ಲಿಸುವವರ ಪರಿಚಯವೂ ಮಾಡಿದಂತಾಗಿದೆ.
ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ. ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...
READ MORE