ಅಭಿನವ ಪಂಪಭಾರತ

Author : ಶಾಂತಿನಾಥ ದಿಬ್ಬದ

Pages 120

₹ 200.00




Year of Publication: 2022
Published by: ಆದಿಕವಿ ಪಂಪ ಅಧ್ಯಯನ ಪೀಠ 2022

Synopsys

`ಅಭಿನವ ಪಂಪಭಾರತ’ ಕೃತಿಯು ಶಾಂತಿನಾಥ ದಿಬ್ಬದ ಅವರ ಸಂಕಲನವಾಗಿದೆ. ಮಹಾಕವಿ ಪಂಪನು ತನ್ನ ಕೃತಿಗಳ ಮೂಲಕ ಅವಿಚ್ಛಿನ್ನ ಸೃಜನ ಪರಂಪರೆಗೆ ದಾರಿ ಮಾಡಿಕೊಟ್ಟಿದ್ದಾನೆ. ಪ್ರೇರಣೆ ನೀಡಿದ್ದಾನೆ. ಆತನ 'ವಿಕ್ರಮಾರ್ಜುನ ವಿಜಯ' ಮತ್ತು 'ಆದಿಪುರಾಣ' ಎಂಬ ಕೃತಿಗಳನ್ನಾಧರಿಸಿ ಕನ್ನಡದಲ್ಲಿ ಕೆಲವು ಕಾದಂಬರಿ, ನಾಟಕ, ಮತ್ತು ಕವಿತೆಗಳು ರಚನೆಯಾಗಿವೆ. ಆ ಮಾಲಿಕೆಗೆ ಪ್ರೊ. ಶಾಂತಿನಾಥ ದಿಬ್ಬದ ಅವರು ರಚಿಸಿರುವ 'ಅಭಿನವ ಪಂಪಭಾರತ' ಎಂಬ ಕೃತಿಯು ಉತ್ತಮ ಸೇರ್ಪಡೆಯಾಗಿದೆ. ಈ ಕೃತಿಯು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠದ ಮೂಲಕ ಪ್ರಕಟವಾಗುತ್ತಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ಪ್ರೊ. ಕೆ.ಬಿ. ಗುಡಸಿ.

About the Author

ಶಾಂತಿನಾಥ ದಿಬ್ಬದ
(01 June 1953)

.ಡಾ. ಶಾಂತಿನಾಥ ದಿಬ್ಬದ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಾಪುರ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ, ಪಿಎಚ್ ಡಿ ಪದವೀಧರರು. ಕರ್ನಾಟಕ ವಿ.ವಿ, ಗುಲಬರ್ಗಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ನಂತರ ಕುಲಸಚಿವರಾಗಿ 2015 ರಲ್ಲಿ ನಿವೃತ್ತರಾದರು.   ಕೃತಿಗಳು: ಮಹಾಕವಿ ಪಂಪ ಮತ್ಯು ಅವನ ಕೃತಿಗಳು, ಪಂಪ ಭಾರತ ಸಾಂಸ್ಕೃತ ಅಧ್ಯಯನ (ಪಿಎಚ್ ಡಿ ಮಹಾಪ್ರಬಂಧ), ವಾಗ್ದೇವಿಯ ಭಂಡಾರದ ಮುದ್ರೆ, ಆಗಮಿಕ, ಜೀವಪರ-ಜನಪರ, ಜೈನ ಸಂಸ್ಕೃತಿ ಸಮೀಕ್ಷೆ (ಸಂಪಾದತ ಕೃತಿಗಳು) ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ), ಮುನಿ ...

READ MORE

Related Books