ಸೈನಿಕನ ಆಂತರ್ಯದ ಪಿಸುನುಡಿ ಬೈಂದೂರು ಚಂದ್ರಶೇಖರ ನಾವಡ ಅವರ ಕೃತಿಯಾಗಿದೆ. ದೇಶವೇ ಅಸ್ಥಿರ ಸ್ಥಿತಿಯಲ್ಲಿರುವಾಗ ನಮ್ಮ ಆಸ್ತಿ-ಐಶ್ವರ್ಯ, ಬ್ಯಾಂಕ್ ಬ್ಯಾಲೆನ್ಸ್, ಕಾರು, ಬಂಗಲೆ ನಿಮಿಷಾರ್ಧದಲ್ಲಿ ನೀರ ಮೇಲಿನ ಗುಳ್ಳೆಯಂತೆ ಮಾಯವಾಗಬಹುದು. ರಾತ್ರೋ ರಾತ್ರಿ ದೇಶ ಬಿಟ್ಟು ಓಡಬೆಕಾದ ಸ್ಥಿತಿ ಎದುರಾಗಬಹುದು. ದೇಶದ ನಾಯಕತ್ವ ಯೋಗ್ಯರ ಕೈಯಲ್ಲಿರುವರೆಗೆ, ಸೇನೆ ರಾಷ್ಟ್ರವನ್ನು ರಕ್ಷಿಸಲು ಶಕ್ತವಾಗಿರುವರೆಗೆ ಮಾತ್ರ ನಾವು ಸುರಕ್ಷಿತ. ಸೇನೆಯ ಆತ್ಮ ವಿಶ್ವಾಸ ಕುಗ್ಗಿಸುವ ಕುತಂತ್ರಗಳು ಬೆಂಕಿಯೊಂದಿಗೆ ಸರಸವಾಡಿದಂತೆಯೇ ಸರಿ. ದೇಶ ಚೆನ್ನಾಗಿದ್ದರೆ ಮಾತ್ರ ನಾವು ಸುಖ-ನೆಮ್ಮದಿಯ ಬದುಕು ನಡೆಸಬಹುದು. ಸೇನೆಯ ಸಾಮರ್ಥ್ಯ - ನೈತಿಕ ಸ್ಥೈರ್ಯ ಆಧಾರದ ಮೇಲೆ ನಮ್ಮೆಲ್ಲರ ಬದುಕು ನಿಂತಿದೆ. ದೇಶದ ಸೇನೆ ಶಕ್ತವಾಗಿದ್ದರೆ ನಮ್ಮ ಬದುಕು ಸುಂದರ. ಯುವಭಾರತ ದೇಶವನ್ನು ಪ್ರೀತಿಸಲಿ, ಸೇನೆಯ ಕುರಿತು ಒಲವು ಇಟ್ಟುಕೊಳ್ಳಲಿ. ಸೈನಿಕರಾಗುವ ಸಂಕಲ್ಪ ಕಟ್ಟಿಕೊಳ್ಳಲಿ ಎನ್ನುವ ಸದಾಶಯ ನನ್ನದು. ಸೇನೆಗೂ ಸರ್ಕಾರದ ಇತರ ವಿಭಾಗಗಳಂತೆಯೇ ಪ್ರತಿಭಾನ್ವಿತರೂ, ಸಾಹಸಿಗಳೂ, ಪ್ರಬಲ ಇಚ್ಚಾ ಶಕ್ತಿಯುಳ್ಳವರೂ, ಸಕಾರಾತ್ಮಕ ಚಿಂತನೆಯ ಯುವಕರು ಅಗತ್ಯ. ಶಹರಗಳಿಂದ ದೂರ, ಎತ್ತರದ ಗೋಡೆಯ ನಡುವಿನ ಕಂಟೋನ್ಮೆಂಟಿನಲ್ಲಿ, ನಾಗರಿಕ ಸುಖ-ಸವಲತ್ತುಗಳಿಲ್ಲದ ಗಡಿಪ್ರದೇಶದಲ್ಲಿ ಜೀವನದ ತಾರುಣ್ಯವನ್ನು ಕಳೆಯುವ ರಾಷ್ಟ್ರಪ್ರಹರಿಗಳ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಮೂಲಕ ಸೈನಿಕ ಬದುಕನ್ನು ಸೂಕ್ಷ್ಮವಾಗಿ ಪರಿಚಯಿಸುವ, ಸೈನಿಕರನ್ನು ಗೌರವವಾಗಿ ಕಾಣುವಂತೆ ಪ್ರಚೋದಿಸುವ, ಅವರ ಭಾವನೆಗಳನ್ನು ಗೌರವಿಸುವಂತೆ ಕೋರುವ ಒತ್ತಾಸೆಯ ಮೇರೆಗೆ ಹೊರ ಬಂದ ಈ ಕೃತಿ ನನ್ನ ಸ್ವಂತ ವೃತ್ತಿ ಬದುಕಿಗೆ ಸಂಬಂಧಿಸಿದ್ದಾದರೂ ಸೇನೆಯ ವಿವಿಧ ವಿಭಾಗಗಳ ಸೈನಿಕರೆಲ್ಲರ ಸಾಮಾನ್ಯ ಅನುಭವವೂ ಆಗಿ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ.
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ದಿ. ರಾಮನಾವಡ ಮತ್ತು ದಿ. ಗೋದಾವರಿ ಅವರ ಪುತ್ರನಾಗಿ 10-09-1965ರಲ್ಲಿ ಜನಿಸಿದರು . 1990ರಲ್ಲಿ ಆರ್ಮಿ ಎಜುಕೇಶನಲ್ ಕೋರ್ ಗೆ ಬೋಧಕರಾಗಿ ಸೇವೆ ಪ್ರಾರಂಭಿಸಿದರು. ಭಾರತೀಯ ಸೇನೆಯ 22 ವರ್ಷದ ಸೇವಾವಧಿಯಲ್ಲಿ ಉಗ್ರವಾದಗ್ರಸ್ತ ಜಮ್ಮು ಕಾಶ್ಮೀರದ ಉಚ್ಚತುಂಗ ಪ್ರದೇಶಗಳಲ್ಲೂ, ಸೇನೆಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಾದ ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜ್ ಪಚಮಡಿ (ಮಧ್ಯಪ್ರದೇಶ.) ಮತ್ತು ಆರ್ಟಿಲರಿ ಟ್ರೈನಿಂಗ್ ಸೆಂಟರ್ ಹೈದರಾಬಾದ್‍ನಲ್ಲೂ ಸೇವೆ ಮಾಡಿ ಜಮ್ಮು ಕಾಶ್ಮೀರದಲ್ಲಿ `ಅಪರೇಶನ್ ರಕ್ಷಕ್’ ಮತ್ತು ಕಾರ್ಗಿಲ್ ಸಂಘರ್ಷದ `ಅಪರೇಶನ್ ವಿಜಯ್’ ದಲ್ಲಿ ಸಕ್ರಿಯವಾಗಿ ಕರ್ತವ್ಯ ...
READ MORE