‘ಚಿತ್ರಾಕ್ಷರ’ ಕೆ.ವಿ. ಸುಬ್ರಹ್ಮಣ್ಯಂ ಅವರ ಚಿತ್ರ ಮತ್ತು ಸಾಹಿತ್ಯಗಳ ಪಕ್ಷಿ ನೋಟ. ಹರಿಶ್ರೀ ವೈ.ಜೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಇದಕ್ಕೆ ಪುಂಡಲೀಕ ಕಲ್ಲಿಗನೂರುರವರ ಮುನ್ನುಡಿ ಬರಹವಿದೆ: ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ ಅಭಿವ್ಯಕ್ತಿಗೆ ಪೆನ್ನನ್ನೂ ಹಿಡಿದಿದ್ದಾರೆ. ಬ್ರಷ್‌ನ್ನೂ ಬಳಸಿದ್ದಾರೆ.
ಆ ಎರಡೂ ಮುಖಗಳನ್ನು ಈ ಪುಸ್ತಕದಲ್ಲಿ ದಾಖಲಿಸುವ ಅನನ್ಯ ಪ್ರಯತ್ನ ಇಲ್ಲಿ ನಡೆದಿದೆ. ಕೆ. ವಿ. ಎಸ್. ಅವರು ಲಲಿತಕಲಾ ಮೀಮಾಂಸಕರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಮುಂಚೂಣಿಯಲ್ಲಿರುವ ವಿಶಿಷ್ಠ ವ್ಯಕ್ತಿತ್ವದ ಸಾಂಸ್ಕೃತಿಕ ಜೀವಿ. ಅಂಥವರನ್ನು ಕುರಿತಾದ ಈ ಪುಸ್ತಕವು 'ಆನೆಯನ್ನು ಕನ್ನಡಿಯಲ್ಲಿ' ಕಂಡಂತೆ ಆಗಿರುವುದಂತೂ ಸತ್ಯ. ಇಲ್ಲಿಯ ಪ್ರತಿ ಪುಟವೂ ಕೆ. ವಿ. ಎಸ್. ಅವರನ್ನು ಮತ್ತು ಅವರ ಕಲಾ ಚಟುವಟಿಕೆಯನ್ನು ಸರಳವಾಗಿ ಬಿಂಬಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.