ಉತ್ತರ ಕನ್ನಡ ಜಿಲ್ಲೆಯ ಒಂಬತ್ತು ಹಿರಿಯ ಖ್ಯಾತ ಯಕ್ಷಗಾನ ಕಲಾವಿದರೊಡನೆ ನಿಕಟ ಒಡನಾಟ ಹೊಂದಿದ ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರು ಬರೆದ ವ್ಯಕ್ತಿಚಿತ್ರಗಳು ಇಲ್ಲಿ ಸಂಕಲಿತವಾಗಿವೆ. ಇವರೆಲ್ಲ ಕೀರ್ತಿಶೇಷರು. ಅವರ ಅಭಿನಯ ಸಾಮರ್ಥ್ಯ ಮತ್ತು ಅವರ ಬದುಕಿನ ಕುರಿತಾದ ಆತ್ಮೀಯ ನುಡಿಚಿತ್ರವನ್ನು ಹೊಂದಿರುವ 150 ಪುಟಗಳ ಈ ಕೃತಿಯನ್ನು ಇಂದು ಮಂಗಳೂರಿನ ಕಲ್ಲಚ್ಚು ಪ್ರಕಾಶನದ ಆಶ್ರಯದಲ್ಲಿ ರಾಜ್ಯ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ಎಲ್. ಜಿ. ಹೆಗಡೆ ಅವರು ಚಿಕ್ಕ - ಚೊಕ್ಕ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಕೆರೆಮನೆ ಶಿವರಾಮ ಹೆಗಡೆ, ಮಾವಿನಕೆರೆ ಯಾಜಿ ಭಾಗವತರು, ಕೆರೆಮನೆ ಮಹಾಬಲ ಹೆಗಡೆ, ಮೂರೂರು ದೇವರು ಹೆಗಡೆ, ಕೊಂಡದಕುಳಿ ರಾಮ / ಲಕ್ಷ್ಮಣ ಹೆಗಡೆ ಸಹೋದರರು, ಮದ್ದಳೆವಾದಕ ಕಿನ್ನೀರು ನಾರಾಯಣ ಹೆಗಡೆ, ಕೆರೆಮನೆ ಶಂಭು ಹೆಗಡೆ, ಗಜಾನನ ಹೆಗಡೆ ಇವರ ಪರಿಚಯಗಳನ್ನೊಳಗೊಂಡಿರುವ ಈ ಕೃತಿಗೆ ಹಿರಿಯ ಯಕ್ಷಗಾನ ತಜ್ಞ ಡಾ. ಜಿ. ಎಸ್. ಭಟ್ ಸಾಗರ ಅವರು ಮುನ್ನುಡಿ ಬರೆದಿದ್ದಾರೆ
ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರಗಳಲ್ಲಿ 60 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ 78 ವರ್ಷ ವಯಸ್ಸಿನ ಎಲ್. ಎಸ್. ಶಾಸ್ತ್ರಿಯವರ ಜನ್ಮಭೂಮಿ ಉತ್ತರಕನ್ನಡ, ಕರ್ಮಭೂಮಿ ಬೆಳಗಾವಿ,. ಸುಮಾರು 110 ಕೃತಿಗಳು, 40 ಸಾವಿರಕ್ಕೂ ಹೆಚ್ಚು ಬಿಡಿ ಬರೆಹಗಳು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿ ರಚನೆ 15ಕ್ಕೂ ಹೆಚ್ಚು ಸಾಹಿತ್ಯ ಕಲೆ ಪತ್ರಿಕಾ ಸಂಘಟನೆ; ಐದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ಸಂಘಟನೆ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ವಿಶಾಲ ಕರ್ನಾಟಕ, ಲೋಕದರ್ಶನ ಮೊದಲಾದ ಪತ್ರಿಕೆಗಳಲ್ಲಿ ಆರು ದಶಕಗಳ ಸೇವೆ; ಕರ್ನಾಟಕ ಪತ್ರಿಕಾ ಅಕಾಡೆಮಿ, ಕೆಯೂಡಬ್ಯುಜೆ, ಸೂರಿ ಪ್ಸೇರಶಸ್ರಿತಿ, ಪಾಂಡೇಶ್ವರ ಪ್ರಸಶ್ತಿ, ಸಹಿತ 20ಕ್ಕೂ ಹೆಚ್ಚು ಪ್ರಶಸ್ತಿ ...
READ MORE