ಡಿ ವಿ ಜಿ ಜ್ಞಾಪಕ ಚಿತ್ರಶಾಲೆ- 8 ಸಂಪುಟಗಳು (.ಸಾಹಿತಿ ಸಜ್ಜನ ಸಾರ್ವಜನಿಕ, ಕಲೋಪಾಸಕರು, ಸಾಹಿತ್ಯೋಪಾಸಕರು, ಮೈಸೂರು ದಿವಾನರು, ವೈದಿಕ ಧರ್ಮಸಂಪ್ರದಾಯಸ್ಥರು, ಹಲವಾರು ಸಾರ್ವಜನಿಕರು, ಹೃದಯ ಸಂಪನ್ನರು, ಸಂಕೀರ್ಣ ಸ್ಮೃತಿಸಂಪುಟ) ಒಳಗೊಂಡಿದೆ. ‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಡಿವಿಜಿ ಅವರು ಕನ್ನಡ ಸಾಹಿತ್ಯದಲ್ಲಿ ಉತ್ತಮ ಕೃತಿಗಳನ್ನು ಸೇರ್ಪಡೆ ಮಾಡಿಸಿದ್ದಾರೆ. ರಾಜಕೀಯ ಸೇರಿದಂತೆ ಸುಮಾರು 70ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಡಿವಿಜಿ, ಅವರ ಕುರಿತೇ ಇತರೆ ಲೇಖಕರು ಬರೆದ ಕೃತಿಗಳ ಸಂಖ್ಯೆ-17ಕ್ಕೂ ಅಧಿಕ ಕೃತಿಗಳು ಸೇರಿವೆ. ಒಟ್ಟಿನಲ್ಲಿ, ಡಿವಿಜಿ ಎಂದರೆ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ, ಅಪ್ರತಿಮ, ಅಸಾಧಾರಣ ಚಿಂತಕ. ಮೇಲೆ ಸೂಚಿಸಿದ ಎಲ್ಲ 8 ಸಂಪುಟಗಳ ಸಮಗ್ರ ಕೃತಿಯೇ- ಡಿ ವಿ ಜಿ ಜ್ಞಾಪಕ ಚಿತ್ರಶಾಲೆ- 8 ಸಂಪುಟಗಳು
©2024 Book Brahma Private Limited.