‘ನಾಮ ಧ್ಯೇಯ’ ಕೃತಿಯು ಸಂತೋಷ್ ತಮ್ಮಯ್ಯ ಅವರ ವ್ಯಕ್ತಿಚಿತ್ರಣ ಸಂಕಲನವಾಗಿದೆ. ಇಲ್ಲಿ ಮಂಗಲ್ಪಾಡಿ ನಾಮದೇವ ಶೆಣೈ ಅವರ ವಿಚಾರಗಳನ್ನು ತಿಳಿಸಲಾಗಿದೆ. ಈ ಕೃತಿಯನ್ನು ಲೇಖಕರು ಹಠಯೋಗಿಯ ಪಥದರ್ಶನವೆಂದೂ ಕರೆಯುತ್ತಾರೆ. ನಾಮದೇವ ಶೆಣೈ ಅವರು ನಿರ್ಬಿತ ಛಲಗಾರ, ಹುಟ್ಟು ಹೋರಾಟಗಾರ, ಬ್ಯಾಕಿಂಗ್ ಕ್ಷೇತ್ರದಲ್ಲಿ ಕಮ್ಯುನಿಸ್ಟರನ್ನು ವಿರೋಧಿಸಿ ಭಾರತೀಯ ಮಜ್ಫೂರ್ ಸಂಘಕ್ಕೆ ಶಕ್ತಿಯನ್ನು ತುಂಬಿದವರು. ಖ್ಯಾತ ಕಾರ್ಮಿಕ ನಾಯಕ ಪ್ರಭಾಕರ ಘಾಟಿಯವರಿಗೆ ಆತ್ಮೀಯವಾಗಿ ಸಂಘಟನೆಯನ್ನು ಕಟ್ಟುವಲ್ಲಿ ಅವರೊಂದಿಗೆ ಸೇರಿ ಇದ್ದವರು. ಆಡಚಣೆಗಳು ಏನೇ ಇದ್ದರೂ ಅದನ್ನು ಮೆಟ್ಟಿನಿಂತವರು. ಆಯುರ್ವೇದದಲ್ಲಿ ಸಂಶೋಧನೆಗಳನ್ನು ನಡೆಸಿದವರು. ‘ಹೊಸದಿಗಂತ’ ಪತ್ರಿಕೆಗೆ ಪೋಷಕರಂತೆ ನಿಂತವರು ಎನ್ನುತ್ತಾರೆ ಈ ಕೃತಿಯ ಬೆನ್ನುಡಿಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್.
©2024 Book Brahma Private Limited.