‘ಎನ್ನೆಲ್ - ಎರಡು ಮುಖ’ ಪ್ರತಿಭಾವಂತ ನಿರ್ದೇಶಕ ಲಕ್ಷ್ಮೀನಾರಾಯಣ್ ಅವರ ವ್ಯಕ್ತಿ ಚಿತ್ರಣ ಕಟ್ಟಿಕೊಟ್ಟಿರುವ ಕೃತಿ. ಲೇಖಕ ಉಮೇಶ್ ಕುಲಕರ್ಣಿ ಅವರು ಈ ಕೃತಿಯನ್ನು ನಿರೂಪಿಸಿದ್ದಾರೆ. ನಾಂದಿ, ಉಯ್ಯಾಲೆ, ಮುಕ್ತಿ, ಬೆಟ್ಟದ ಹೂವು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕನ್ನು ತೋರಿದ ಎನ್ನೆಲ್ ಅವರ ವ್ಯಕ್ತಿತ್ವ, ಮತ್ತು ಚಿತ್ರಗಳ ಸಂಪೂರ್ಣ ವಿವರಗಳೊಂದಿಗೆ ಅವರು ನಿಭಾಯಿಸುತ್ತಿದ್ದ ಚಾಕಚಕ್ಯತೆಯ ಬಗ್ಗೆ ವಿವರಿಸಿದ್ದಾರೆ.
ಪುಸ್ತಕ ಪರಿಚಯ: ಹೊಸತು-2009 ಏಪ್ರಿಲ್
ಮೂವತ್ತು ವರ್ಷಗಳ ಹಿಂದಿನ ಮಾತು. ನಾಂದಿ, ಉಯ್ಯಾಲೆ ಗಳಂಥ ಹೊಸ ಅಲೆಯ ಚಿತ್ರಗಳು ಪ್ರೇಕ್ಷಕನನ್ನು ಮೋಡಿ ಮಾಡಿದಂಥ ಸಮಯ. ಅಂದಿನ ಕೆಲವೇ ಪ್ರತಿಭಾವಂತ ಚಿತ್ರನಿರ್ದೇಶಕರಲ್ಲಿ ಲಕ್ಷ್ಮೀನಾರಾಯಣ್ ಪ್ರಮುಖರು. ಯಾವುದೇ ಮುಜುಗರವಿಲ್ಲದೆ ಮನೆಮಂದಿಯೆಲ್ಲ ಕೂತು ನೋಡಬಹುದಾದ ಚಿತ್ರಗಳನ್ನು ಎನ್ನೆಲ್ ನೀಡಿದ್ದಾರೆ. ಆರು ಚಿತ್ರಗಳನ್ನಷ್ಟೇ ಇವರು ನಿರ್ದೆಶಿಸಿದ್ದರೂ ಅವೆಲ್ಲವೂ ಹೆಸರುಗಳಿಸಿ, ಪ್ರೇಕ್ಷಕರಿಂದ ವಿಮರ್ಶಕರಿಂದ ಗುರುತಿಸಲ್ಪಟ್ಟಿವೆ. ಈ ಪುಸ್ತಕದಲ್ಲಿ ಎನ್ನೆಲ್ ಅವರ ವ್ಯಕ್ತಿ ಚಿತ್ರಣವಿದ್ದು, ಅವರ ಚಿತ್ರಗಳ ಸಂಪೂರ್ಣ ವಿವರ ಹಾಗೂ ನಿರ್ದೆಶನವನ್ನು ಅವರು ನಿಭಾಯಿಸುತ್ತಿದ್ದ ಚಾಕಚಕ್ಯತೆಯ ಬಗ್ಗೆ ಸಾಕಷ್ಟು ವಿಸ್ತಾರವಾಗಿ ಹೇಳಲ್ಪಟ್ಟಿದೆ.
©2024 Book Brahma Private Limited.