ʼವೀರಗಾಥೆʼ ಯೋಧರ ಅಜ್ಞಾತ ಸಾಹಸ ಕಥನಗಳ ಪುಸ್ತಕವನ್ನು ಲೇಖಕಿ ಸಿಂಧೂ ಪ್ರಶಾಂತ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಹಿಮಾಚ್ಛಾದಿತ ಬೆಟ್ಟಗಳಲ್ಲಿ ಬರಿಗಾಲಲ್ಲಿ ಹೋರಾಡಿದವರು, ತನ್ನವರ ಪ್ರಾಣ ರಕ್ಷಣೆಗೆ ಎದೆ ನೀಡಿ ಸಾವನ್ನು ಆಹ್ವಾನಿಸಿದವರು, ಹನ್ನೆರಡು, ಇಪ್ಪತ್ತು ಗುಂಡಿನೇಟು ತಿಂದರೂ ದೇಶ ರಕ್ಷಣೆಗೆ ತನ್ನ ಕೊನೆ ಉಸಿರಿರುವವರೆಗೆ ಹೋರಾಡಿದವರ. ಪ್ರತಿಭಾವಂತ ವಿದ್ಯಾರ್ಥಿ, ಅದ್ಭುತ ಕ್ರೀಡಾಪಟು ಬಯಸಿದ್ದರೆ ಏಸಿ ಕಚೇರಿಯಲ್ಲಿ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದಿತ್ತು. ಆದರೆ ಆಯ್ದುಕೊಂಡಿದ್ದು ಮಾತ್ರ ದೇಶ ರಕ್ಷಣೆಯ ಕಾಯಕ. ಇದು ಭಾರತ ಮಾತೆಗೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ನಮ್ಮ ರಕ್ಷಕರ ಕಥೆ, ಹೆಮ್ಮೆಯ ಸೈನಿಕರ ಅಜ್ಞಾತ ಸಾಹಸ ಕಥನಗಳ “ವೀರಗಾಥೆ” ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
ಲೇಖಕಿ ಸಿಂಧೂ ಪ್ರಶಾಂತ್ ಮೂಲತಃ ಹಾಸನದವರು. ತಂದೆ ನಾಗರಾಜ್ ಕೆ. ತಾಯಿ ಅಮೃತಾ ನಾಗರಾಜ್. ಪ್ರಸ್ತುತ ಮಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚೊಚ್ಚಲ ಕೃತಿ ‘ವೀರಗಾಥೆ’. ...
READ MORE