ಕವಿ ಹಾಗೂ ಲೇಖಕ ನಿಷ್ಠಿ ರುದ್ರಪ್ಪ ಅವರು ರಚಿಸಿದ ಕೃತಿ-ಕನ್ನಡ ತೇರನ್ನೆಳೆವವರು. ಕನ್ನಡಕ್ಕೆ ಸುಮಾರು 2 ಸಾವಿರಕ್ಕೂ ಅಧಿಕ ವರ್ಷದ ಇತಿಹಾಸವಿದ್ದು, ಭಾರತ ಸರ್ಕಾರ ಈ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸಿದೆ. ಕನ್ನಡದ ಸಿರಿವಂತಿಕೆಯನ್ನು ಹೆಚ್ಚಿಸಿ ಉಳಿಸಿ-ಬೆಳೆಸಿಕೊಂಡವರು ಸಹಸ್ರಾರು ಜನರಿದ್ದು, ಅವರನ್ನು ಸ್ಮರಿಸುವುದು ಕನ್ನಡಿಗರ ಕರ್ತವ್ಯ. ಈ ಹಿನ್ನೆಲೆಯಲ್ಲಿಈ ಕೃತಿಯನ್ನು ಬೆಂಗಳೂರಿನಲ್ಲಿ ಜರುಗಿದ 77ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಪ್ರಕಪಡಿಸಿತು. ಡಾ. ನಲ್ಲೂರು ಪ್ರಸಾದ ಅವರ (2008 ರಿಂದ 2011ರ) ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ಸೇವೆಸಲ್ಲಿಸಿದ ಮತ್ತು ಜಿಲ್ಲಾ ಘಟಕ ಮತ್ತು ಗಡಿನಾಡ ಘಟಕಗಳ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಒಟ್ಟು 45 ಜನ ಕಾರ್ಯಕಾರಿ ಸಮಿತಿ ಸದಸ್ಯರ ಸಂಕ್ಷಿಪ್ತ ಜೀವನ ಚಿತ್ರಣವನ್ನು ಮತ್ತು ಅವರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಯನ್ನು ಪರಿಚಯಸುವ ಕೃತಿ ಇದಾಗಿದೆ.
©2024 Book Brahma Private Limited.