ಲೇಖಕ ಡಾ. ಪದ್ಮಾವತಮ್ಮ ಅವರ ಕೃತಿ-ವಿಶ್ವದ ಪ್ರಸಿದ್ಧ ಮಹಿಳಾ ಗಣಿತಜ್ಞರು. ಗಣಿತವು ಒಂದು ಅಮೂರ್ತ ವಿಷಯ. ಮಹಿಳೆಯರ ಶಕ್ತಿಗೆ ಮೀರಿದ್ದು ಎಂದೇ ಸಾಮಾನ್ಯರ ನಂಬಿಕೆ ಇದೆ. ಆದರೆ, ಇಲ್ಲಿ ಪ್ರಸ್ತಾಪಿಸಿರುವ ಎಲ್ಲ ಗಣಿತಜ್ಞರು ಮಹಿಳೆಯರೇ ಆಗಿದ್ದಾರೆ. ಇವರು ಮಹಾನ್ ಸಂಶೋಧನೆಗಳಿಗೆ ಕಾರಣೀಕರ್ತರು. ಥಿಯಾನೊ, ಹೈಪಾಶಿಯಾ, ಮರಿಯಾ ಅಗ್ನೇಸಿ, ಸೋಫಿ ಜರ್ಮೇನ್, ಸೋನಿಯಾ ಕೊವಲೆವಿಸ್ಕಯ, ಎಮ್ಮಿ ನಾಯ್‌ಥರ್ ಹೀಗೆ ಗಣಿತ ವಿಷಯದಲ್ಲಿ ಪ್ರಸಿದ್ಧರು. ಇವರೆಲ್ಲರೂ ಗಣಿತದ ಸೌಂದರ್ಯವನ್ನು ತೋರಿದ್ದಾರೆ. ಈ ಪ್ರಸಿದ್ಧ ಗಣಿತಜ್ಞರು ಓದುವಾಗಿನ ಕಷ್ಟಗಳನ್ನೂ ಸಹ ಕೃತಿಯಲ್ಲಿ ವಿವರಿಸಲಾಗಿದೆ.
ಅನುವಾದಕಿ, ಲೇಖಕಿ ಪದ್ಮಾವತಮ್ಮ ಅವರು 1949 ಮಾರ್ಚ್ 12 ರಂದು ಜನಿಸಿದರು. ಗಣಿತದಲ್ಲಿ ಸ್ನಾತಕೋತ್ತರ, ಪಿ.ಎಚ್.ಡಿ ಪದವಿ ಪಡೆದ ಅವರ ಮಾನಸ ಗಂಗೋತ್ರಿಯಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕಿ ಹಾಗೂ ಛೇರ್‌ಮನ್. ವಿವಿಧ ದೇಶಗಳಲ್ಲಿ ಪ್ರಬಂಧ ಮಂಡನೆ ಮತ್ತು ಅತಿಥಿ ಉಪನ್ಯಾಸಕರಾಗಿ ಉಪನ್ಯಾಸ ನೀಡಿದ್ಧಾರೆ. “ಮಹಾವೀರಾಚಾರ್ಯರ “ಗಣಿತ ಸಾರಸಂಗ್ರಹ” , “ಧವಳ ಷಟ್ ಖಂಡಾಗಮ” ಅವರ ಅನುವಾದ ಕೃತಿಗಳು. ’ಜೀವ ಸ್ಥಾನ, ದ್ರವ್ಯಪಾರಮಾನುಗಮ, ಧವಳ ಷಟ್ಖಂಡಾಗಮ, ಫಿಲಾಸಫರ್ ಕರ್ಮ ಸೈಂಬಸ್ಟ್ಸ್ ಅವರ ಮತ್ತಿತರ ಕೃತಿಗಳು. ಶ್ರೀ ಸಿದ್ದಾಂತ ಕೀರ್ತಿ ಪ್ರಶಸ್ತಿ, ಸಾಧನ ಪುರಸ್ಕಾರ, ಚಂದ್ರಾಣಿ ಸ್ಟತಿ ಪುರಸ್ಕಾರ, ಶ್ರುತ ಸಂವರ್ಧನ ...
READ MORE