ಪ್ರಸ್ತುತ ಕೃತಿ ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಸ್ತ್ರೀವಾದಿ ಚಿಂತನೆಗೆ ಅಮೂಲ್ಯ ಕೊಡುಗೆಯಾಗಿದೆ. ಇಲ್ಲಿರುವ ಸಾಧಕಿಯರಲ್ಲಿ ಹಲವರು ಇತಿಹಾಸಕಾರರಿಗೆ ಮುಖ್ಯವಾಗಿಲ್ಲ. ಹಾಗಾಗಿ ಅನುಪಮಾ ತರಹದ ಲೇಖಕಿಯರು ಕಳೆದ ಶತಮಾನದ ಈ ಸಾಧಕಿಯರನ್ನು ಕುರಿತು ಬರೆದಾಗ ಅದು ಅಪೂರ್ವವೆನಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೇರೆಬೇರೆ ಭಾಷೆಯ ಲೇಖಕಿಯರ ಕುರಿತು ಅಧ್ಯಯನಪೂರ್ಣ ಲೇಖನಗಳು ಬಂದಿರುವಷ್ಟು ವೈದ್ಯರ, ಸ್ವಾತಂತ್ರ ಹೋರಾಟಗಾರರ, ಸ್ತ್ರೀ ಮುಕ್ತಿ ಚಳವಳಿಕಾರರ ಕುರಿತು ಬಂದಿಲ್ಲ. ಆ ಕೊರತೆಯನ್ನು ಲೇಖಕಿ ತುಂಬಿಕೊಟ್ಟಿದ್ದಾರೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE