ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ -ಡಾ ಸುಧಾ ಮೂರ್ತಿ

Author : ಜಿ.ಎನ್. ಉಪಾಧ್ಯ

Pages 53

₹ 50.00




Year of Publication: 2023
Published by: ಕನ್ನಡ ಅಧ್ಯಯನ ವಿಭಾಗ ಮುಂಬೈ ವಿಶ್ವವಿದ್ಯಾ

Synopsys

‘ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ -ಡಾ ಸುಧಾಮೂರ್ತಿ’ ಜಿ.ಎನ್. ಉಪಾಧ್ಯ ಅವರ ಕೃತಿಯಾಗಿದೆ. ಇದಕ್ಕೆ ಡಾ.ಸುಧಾ ಮೂರ್ತಿಯವರ ಬೆನ್ನುಡಿ ಬರಹವಿದೆ; ಸ್ತ್ರೀ ಸಮೃದ್ಧತೆಯ ಪ್ರತಿಕೃತಿಯಾದ ಡಾ. ಸುಧಾ ಮೂರ್ತಿಯವರು ಕನ್ನಡ ನಾಡು ಕಂಡ ಮೇಲ್ಪಂಕ್ತಿಯ ಸಾಧಕರು. ಅವರು ಅನುಭವ, ವಿದ್ವತ್ತು, ನಿಸ್ವಾರ್ಥ ಸೇವೆಯಿಂದ ಉದ್ಯಮ, ಸಾಹಿತ್ಯ, ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ಮಿಂಚಿದ ಧೀಮಂತ ಚೇತನ. ತಾವು ಕಂಡ ಸುತ್ತಲಿನ ಬದುಕನ್ನು ಸಾಂಸ್ಕೃತಿಕ ಇತಿಹಾಸದ ಕಥನವಾಗಿ ಕಟ್ಟಿ ಜಗದಗಲಕ್ಕೆ ಜೋಡಿಸಿದ ಸ್ವಚ್ಛಂದ ಮನಸ್ಸಿನ ಬರಹಗಾರರು. ಉದಾರ ದೃಷ್ಟಿಕೋನವನ್ನು ಬೆಳೆಸಿಕೊಂಡು ಬಹುಮುಖ ನೆಲೆಗಳಲ್ಲಿ ವರ್ತಮಾನದ ಬದುಕಿಗೆ ಸ್ಪಂದಿಸುವ ಉತ್ಸಾಹಿ. ವಿಶಿಷ್ಟವಾದ ವೈಚಾರಿಕ ಚಿಂತನೆಗಳೊಂದಿಗೆ ವ್ಯಕ್ತಿತ್ವ ವಿಕಸನದ ಅಗತ್ಯತೆಯ ಅರಿವು ಮೂಡಿಸಿ ಸಮಾಜದಲ್ಲಿ ಸುಧಾರಣೆಯನ್ನು ಕಾಣುವ ಹಂಬಲ ಹೊತ್ತ ಆಶಾವಾದಿ. ಲಿಂಗ ತಾರತಮ್ಯವಿಲ್ಲದೆ ವಿದ್ಯಾ ಬಲದಿಂದ, ಆತ್ಮವಿಶ್ವಾಸದಿಂದ ಪ್ರೀತಿ, ಗೌರವ, ಸ್ವಾಭಿಮಾನದ ಬದುಕನ್ನು ನಡೆಸುವ ಅವಕಾಶ ಪ್ರತಿಯೊಬ್ಬ ವ್ಯಕ್ತಿಗೂ ಸಿಗುವಂತೆ ಆದರ್ಶ ಸಮಾಜವನ್ನು ರೂಪುಗೊಳಿಸುವ ನಿಟ್ಟಿನಲ್ಲಿ ಅವರ ನಡಿಗೆ ಸಾಗಿದೆ. ಅವರ ಸಾಟಿಯಿಲ್ಲದ ಸಾಧನೆಯನ್ನು ಗಮನಿಸುವ ಪ್ರಯತ್ನದಲ್ಲಿ ಗೋಚರಿಸಿದ್ದು- 'ಸಾಹಿತ್ಯ ಸಿದ್ಧಿಸಿರಿ ಸೇವೆಯ ಸಾಕಾರ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಜಿ.ಎನ್. ಉಪಾಧ್ಯ
(07 February 1967)

ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ  ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...

READ MORE

Related Books