ರಾಷ್ಟ್ರದ ಪ್ರಖ್ಯಾತ ಮಹನೀಯರು -ಈ ಕೃತಿಯ ಲೇಖಕರು-ಬಿ.ಎಚ್. ನಿರಗುಡಿ. ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಾನ್ ವ್ಯಕ್ತಿಗಳ ಸಂಕ್ಷಿಪ್ತ ಚರಿತ್ರೆಯ ಕೃತಿ ಇದು. ತುಂಬಾ ಸರಳವಾಗಿ ವಿಶೇಷವಾಗಿ ಮಕ್ಕಳಿಗೂ ಅರ್ಥವಾಗುವ ಹಾಗೆ ವಿಷಯ ಮಂಡನೆ ಇದೆ. ಸ್ವಾಮಿ ವಿವೇಕಾನಂದರು, ಮದರ್ ತೆರೆಸಾ, ಡಾ ಬಿ ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ, ವಲ್ಲಭಭಾಯಿ ಪಟೇಲ್, ಲಾಲ್ ಬಹಾದ್ದೂರ ಶಾಸ್ತ್ರೀ, ಬಸವಣ್ಣ, ಸುಭಾಶ್ಚಂದ್ರ ಭೋಸ್ ಮಹಾನ್ ನಾಯಕರ ಚರಿತ್ರೆಯನ್ನು ಒಳಗೊಂಡಿದೆ.
ಲೇಖಕ ಬಿ.ಎಚ್. ನಿರಗುಡಿ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕವಲಗಾ ಗ್ರಾಮದವರು. ಗುಲಬರ್ಗಾ ವಿವಿಯಿಂದ ಎಂ.ಎ, ಎಂ.ಇಡಿ ಪದವೀಧರರು. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಗರದ ಖಾಸಗಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ಸಾಹಿತ್ಯ ಸಾರಥಿ’ ಮಾಸ ಪತ್ರಿಕೆಯ ಸಂಪಾದಕರು. ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಗೌರವಿಸುತ್ತಿದ್ದಾರೆ. ಕಲಬುರಗಿ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕೃತಿಗಳು: ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಕನ್ನಡ ಭಾಷೆ ಹಾಗೂ ...
READ MORE