‘ಕನ್ನಡ ನವೋದಯ ಪ್ರವರ್ತಕ ಬಿ.ಎಂ. ಶ್ರೀಕಂಠಯ್ಯ’ ವ್ಯಕ್ತಿ ಪರಿಚಯ ಮತ್ತು ಸೂಕ್ತಿಗಳು ಕೃತಿಯನ್ನು ಪ್ರೊ.ಡಿ. ಲಿಂಗಯ್ಯ ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಪ್ರತಿಭಾವಂತ ದಾರ್ಶನಿಕರ ನುಡಿಗಳು ಭವಿಷ್ಯವಾಣಿಗಳಾಗಿರುತ್ತವೆ. ಅಂಥವರರ ತ್ರಿಕಾಲ ಜೀವನಧಾರೆ ಸಮಸ್ತ ಜನಾಂಗದ ಶ್ರೇಯಸ್ಸಿಗೆ ಹಾಗೂ ಪೋಷಣೆಗೆ ಸಾಧನವಾಗುತ್ತದೆ. ಭಾಷಿಕ ವಿಷಯವೂ ಹಾಗೆಯೇ, ಕನ್ನಡ ಭಾಷೆ ನಡೆದು ಬಂದ ದಾರಿ. ವರ್ತಮಾನದ ಸ್ಥಿತಿ-ಗತಿ, ಭವಿಷ್ಯತ್ತಿನ ಸ್ಥಾನಮಾನ ಯಾವತ್ತೂ ನವೀನ ಪರಿಕಲ್ಪನೆಗೆ ತೆರೆದ ಪುಟವಾಗಿರುತ್ತದೆ.
ಕನ್ನಡ ಭಾಷೆಯ ತಲಸ್ಪರ್ಶಿ ಅಧ್ಯಯನದ ಅರಿವಿರುವವರಿಗೆ ಮಾತ್ರ ನಿಜವಾದ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಕನ್ನಡದ ಕಣ್ವ, ಕನ್ನಡ ನವೋದಯ ಕಾವ್ಯದ ಹರಿಕಾರ, ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರ ಕನ್ನಡ ಭಾಷೆಯ ಅಳಿವು-ಉಳಿವು ಬಗೆಗೆ ಅನನ್ಯವಾಗಿ ಮಂಥಿಸಿದವರಲ್ಲಿ ಅಗ್ರಗಣ್ಯರಾಗಿದ್ದಾರೆ’ ಎಂದಿದ್ದಾರೆ ಪ್ರೊ.ಡಿ. ಲಿಂಗಯ್ಯ.
ಜಾನಪದ ತಜ್ಞ, ಸಾಹಿತಿ ಪ್ರೊ.ಡಿ. ಲಿಂಗಣ್ಣ ಅವರು ಜನಿಸಿದ್ದು 1939 ಡಿಸೆಂಬರ್ 16ರಂದು. ಶ್ರೀರಂಗಪಟ್ಟಣ ತಾಲ್ಲೂಕಿನ ಪೀ ಹಳ್ಳಿಯವರಾದ ಇವರು ಮಂಡ್ಯ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಸಾಹಿತಿ, ಸಂಶೋಧಕರಾಗಿ ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿರುವ ಇವರು ನಾಟಕ, ಕತೆ, ಕವನ, ಜೀವನ ಚರಿತ್ರೆ, ವ್ಯಕ್ತಿಚಿತ್ರಗಳು, ಪ್ರಬಂಧ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿಯು ಸೇವೆ ಸಲ್ಲಿಸಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಕೊಂತಿ ಪೂಜೆ, ಮಣ್ಣಿನ ಮಿಡಿತ, ಪಡಿನೆರಳು, ಬಯಲು ಸೀಮೆಯ ಜನಪದ ಗೀತೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ...
READ MORE