ವಿಜ್ಞಾನಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ವ್ಯಕ್ತಿ ಕುರಿತ ಚಿತ್ರಣಗಳು ಈ ಕೃತಿಯಲ್ಲಿವೆ. ಇದರ ಹೀರೋ ಪಾಲ್ ಏರ್ಡಿಶ್. ತನ್ನ ಜೀವಿತಕಾಲದಲ್ಲಿ ಗಣಿತವನ್ನೇ ಉಸಿರಾಡುತ್ತಿದ್ದ ಈತ 83 ವರ್ಷ ಬದುಕಿದ್ದ. 80 ವಿಜ್ಞಾನಿಗಳು 80 ವರ್ಷದ ಒಂದೇ ಕಾಲಘಟ್ಟದಲ್ಲಿ ಬದುಕಿ ಸಾಧಿಸಬಹುದಾದ್ದನ್ನು ಈತನೊಬ್ಬನೇ ಮಾಡಿದ್ದಾನೆ ಎಂಬ ಉತ್ಪ್ರೇಕ್ಷಿತ ಲೆಕ್ಕಾಚಾರದಿಂದಾಗಿ “ಏಳು ಸಾವಿರ ವರ್ಷ” ಬದುಕಿದಂತಾಯಿತು ಎಂಬುದಾಗಿ ಇದರ ಶೀರ್ಷಿಕೆ. ಕಳೆದೆರಡು ಶತಮಾನಗಳಲ್ಲಿ ಜಾಗತಿಕವಾಗಿ ಪ್ರಗತಿ ಹೊಂದಿದ ಕ್ಷೇತ್ರಗಳಲ್ಲೆಲ್ಲ ವಿಜ್ಞಾನಿಗಳ ಆವಿಷ್ಕಾರಗಳು ಮೇಲುಗೈ ಸಾಧಿಸಿದ್ದು, ಅವರ ಸಾಧನೆಗಳ ದಾಖಲೀಕರಣ ಈ ಕೃತಿಯು ಒಳಗೊಂಡಿದೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE