ನಾಡೋಜ ಚೆನ್ನವೀರ ಕಣವಿ ಅವರ ’ಸ್ಮೃತಿ ಸೌರ’ಭ’ ವ್ಯಕ್ತಿಚಿತ್ರಣಗಳ ಕೃತಿಯಾಗಿದೆ. ಮಾಸ್ತಿ ನಾನು ಕಂಡಂತೆ, ವರಕವಿಯೊಂದಿಗೆ ಒಡನಾಟ, ಡಿವಿಜಿ ಸಂಸ್ಮರಣ, ಶಂಬಾ ಸಂಸ್ಕೃತಿ, ವಿ.ಸೀ. ಮಾಸದ ನೆನಪು, ಪ್ರೊ. ಶಿ.ಶಿ. ಬಸವನಾಳರು, ಕ್ರಾಂತಿಕಾರಿ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ಕಲಬುರ್ಗಿ ನೆನಪುಗಳು, ಹಿರೇಮಲ್ಲೂರು ಈಶ್ವರನ್ ಹೀಗೆ 16 ಮಹನೀಯರ ಬದುಕು-ಬರೆಹಗಳ ಚಿತ್ರಣವಿದೆ. ಕಣವಿಯವರು ಚಿತ್ರಿಸುವ ಯಾವುದೇ ಮಹನೀಯರಲ್ಲಿ ವ್ಯಕ್ತಿಯ ಇತ್ಯಾತ್ಮಕ ಹಾಗೂ ಆದರ್ಶಗಳನ್ನು ಕಾಣಬಹುದು. ವ್ಯಂಗ್ಯ-ವಿಡಂಬನೆ ಇಲ್ಲ. ವ್ಯಕ್ತಿ ಚಿತ್ರಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಉಪಯುಕ್ತವಾಗಿದೆ.
©2024 Book Brahma Private Limited.