‘ರಸಫಲ’ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ. ಇಲ್ಲಿ ಕನ್ನಡದ ಬಹುಮುಖ್ಯ ಲೇಖಕರ ಜೀವನಚಿತ್ರಣಗಳು ಸಂಕಲನಗೊಂಡಿವೆ. ತಾತಯ್ಯನವರ ಆದರ್ಶ, ಕನ್ನಡ ನುಡಿಯ ಹರಿದಾಸ ಬಿ.ಎಂ.ಶ್ರೀ, ಆಲೂರು ವೆಂಕಟರಾಯರು, ದೇವತಾ ಮನುಷ್ಯರು, ಕೃಷ್ಣಶಾಸ್ತ್ರಿಗಳ ಮಾರ್ಗ, ಎಂ.ಎಲ್. ಶ್ರೀಕಂಠೇಶಗೌಡರ ಜಾನಪದ ಪ್ರಜ್ಞೆ, ಪಂಜೆ ಮಂಗೇಶರಾಯರು, ಚಿತ್ರಭಾನು ಅಥವಾ 1942, ಸನ್ಮಿತ್ರ ತೀ.ನಂ.ಶ್ರೀ. ಪುಣ್ಯಸ್ಮರಣೆ- ಡಿ.ಎಲ್.ಎನ್, ಕನ್ನಡಕೊಬ್ಬನೇ ಕೈ ಇಂದಿಗೂ ನಿಜ, ಶಂಕರಭಟ್ಟರ ಗಾಂಧೀ ಸಂದೇಶ, ರಾಜರತ್ನಂ- ಸಮೀಪ ಪರಿಚಯ ಸೇರಿದಂತೆ ಹಲವು ಪ್ರಸಿದ್ಧ ಲೇಖಕರ ಜೀವನ ಚಿತ್ರಣ ಈ ಕೃತಿಯಲ್ಲಿ ಸಂಕಲನಗೊಂಡಿದೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE