ಶ್ರೀಪಾದ ಶೆಟ್ಟಿ ಅವರ ‘ಚಿತ್ರಕ್ಕೆ ಬಣ್ಣ ತುಂಬಿದವರು' ಎಂಬ ವ್ಯಕ್ತಿ ಚಿತ್ರಗಳ ಮಾಲಿಕೆಯು ಮನೋಜ್ಞವಾಗಿದೆ. ಲೇಖಕರು ತಮ್ಮನ್ನು ಪ್ರಭಾವಿಸಿದ, ಒಡನಾಟಕ್ಕೆ ಬಂದ, ವ್ಯಕ್ತಿಗಳ ಕುರಿತು ಬರೆದ ಪರಿಚಯಾತ್ಮಕ, ವಿಮರ್ಶಾತ್ಮಕ ಹಾಗೂ ವಿಶ್ಲೇಷಣಾತ್ಮಕ ಲೇಖನಗಳು ಇಲ್ಲಿವೆ. ಆಯಾ ವ್ಯಕ್ತಿಗಳ ಘನತೆಗೆ ಕುಂದಣವಿಟ್ಟಂತೆ ತಮ್ಮ ಮನಸೆಳೆಯುವ ಶೈಲಿಯಿಂದ ಚಿತ್ರವನ್ನು ಸುಂದರವಾಗಿ, ಬಂಧುರವಾಗಿ ತಮ್ಮದೇ ಆದ ನುಡಿಗಟ್ಟುಗಳಲ್ಲಿ ಚಿತ್ರಿಸಿದ್ದಾರೆ.
ಲೇಖಕ ಶ್ರೀಪಾದ ನಾರಾಯಣ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಗ್ವಾ ಗ್ರಾಮದಲ್ಲಿ 1955 ಮೇ 14ರಂದು ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾದ ಅವರು ಕವನ ರಚನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ಹಲವಾರು ಬಂಡಾಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಿನಕರ ದೇಸಾಯಿ-ಬದುಕು-ಬರಹ (ಮಹಾಪ್ರಬಂಧ), ಮೈತ್ರಿ, ಕಾವ್ಯ, ಕಾವ್ಯನಂದನ (ಕವನ ಸಂಗ್ರಹಗಳು), ಪ್ರಿಯಶರಾವತಿ, ಕಪ್ಪು ಜನರ ಕೆಂಪು ಕಾಶಿ (ಸಂಪಾದನೆ) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ. ...
READ MORE