ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಲಲಿತ ಸಾಹಿತ್ಯ ಮಾಲೆಯಡಿ ಬರೆದ ವ್ಯಕ್ತಿಚಿತ್ರಗಳ ಸಂಗ್ರಹ-ಕುಲದೀಪಕರು. ಕೃತಿಯನ್ನು ಸಂಪಾದಿಸಿದವರು ಚುಳಕಿ ಗೋವಿಂದರಾಯರು. ಕನ್ನಡದ ಕಿಡಿಗಳು, ದೀಪಮಾಲೆ ಈ ಎರಡು ಕೃತಿಗಳ ನಂತರ ವ್ಯಕ್ತಿಚಿತ್ರಗಳನ್ನೇ ಕೇಂದ್ರವಾಗಿಸಿಕೊಂಡು ಬರೆದ ಕೃತಿಯೇ ಕುಲದೀಪಕರು. `ಸಿದ್ಧವನಹಳ್ಳಿ ಕೃರ್ಷನಶರ್ಮರ ಬರೆಹ ಶೈಲಿಯಲ್ಲಿ ಸವಿಯೂ ಇದೆ. ಸೊಬಗು ಇದೆ. ಇವರು ಶಬ್ದ ಶಿಲ್ಪಿಗಳು. ಇವರ ಭಾಷೆಯು ಸದಾ ಜೀವಂತ. ಬರೆಹದಲ್ಲಿ ಹರಟೆ ಇದೆ ಎಂದರೂ ಅದು ಅನುಭವದಿಂದ ಹದವಾದ ಹರಟೆ' ಎಂದು ಕೃತಿಗೆ ಮುನ್ನುಡಿ ಬರೆದ ಲೀಲಾ ಶಿ. ಕಾರಂತ ಅವರು ಪ್ರಶಂಸಿಸಿದ್ದಾರೆ. ಚಾರ್‍ಲಿ ಆಂಡ್ರೂಸ್, ಗೋಪ ಬಂಧುದಾಸ, ಸಿ.ವಿ.ರಾಮನ್, ಭಿಕ್ಷು ಉತ್ತಮ, ವಿಶ್ವೇಶ್ವರಯ್ಯನವರು, ಸಾಲಾರಜಂಗ್, ಮಾಡಪಾಟಿ ಹನುಮಂತರಾಯರು, ಮಹದೇವ ದೇಸಾಯಿ ಇವರ ವ್ಯಕ್ತಿ ಚಿತ್ರಣಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.