ಕಲಾವಿದ, ಚಿಂತಕ, ವಿಚಾರವಾದಿ, ಪ್ರಾಧ್ಯಾಪಕ ಎಲ್ಲವೂ ಆಗಿದ್ದ ಜಿ.ಕೆ ಗೋವಿಂದರಾವ್ ಕುರಿತು ಅವರ ಹಿರಿಯ ಮಗಳು ಶ್ಯಾಮಲಾ ಗುರುಪ್ರಸಾದ್ ಬರೆದಿರುವ “ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ” ಮನೆಯೊಳಗಿನ ಜಿಕೆಜಿ ಅವರ ಚಿತ್ರಣವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತದೆ. ತಂದೆಯ ನೆನಪುಗಳು ಎಲ್ಲರೊಂದಿಗೆ ಹಂಚಿಕೊಳ್ಳುವುದು ನನಗೆ ಆಪ್ತವಾದ ವಿಷಯ. ಅವರ ಕುರಿತಾಗಿ ಪುಸ್ತಕ ಬರೆಯುವಾಗ ನನ್ನಲ್ಲಿ ದಿನಕ್ಕೊಂದು ಭಾವನೆ ಇರುತ್ತಿತ್ತು. ಈ ಪುಸ್ತಕ ನನ್ನ ಒಂದು ಸಣ್ಣ ಪ್ರಯತ್ನ ಎಂದು ಲೇಖಕಿ ಹೇಳಿಕೊಂಡಿದ್ದಾರೆ.
ಲೇಖಕಿ ಶ್ಯಾಮಲಾ ಗುರುಪ್ರಸಾದ್ ಅವರು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರ ಕೆಲವು ಸಣ್ಣ ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪೇಟಿಂಗ್ ಕ್ಷೇತ್ರ ಅವರ ಆಸಕ್ತಿಯಾಗಿದ್ದು, ಹಲವಾರು ಕಡೆಗಳಲ್ಲಿ ಚಿತ್ರ ಪ್ರದರ್ಶನವನ್ನು ನೀಡಿದ್ದಾರೆ. ಚಿತ್ರಕಲಾವಿದರ ಕುರಿತ ಬರವಣಿಗೆಯ ಜೊತೆಗೆ ಪ್ರಸ್ತುತ ವಿದ್ಯಮಾನಗಳ ಕುರಿತು ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ಮಗಳು ಚಿತ್ರ ನಿರ್ಮಾಪಕಿಯಾಗಿದ್ದು, ಎರಡು ಕಿರುಚಿತ್ರಗಳಲ್ಲಿ ನಟಿಸಿರುತ್ತಾರೆ. ಕೃತಿಗಳು: ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ ...
READ MORE