ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಬರೆದ ಕೃತಿ-ಇವರೆಲ್ಲರೂ ಭಾರತ ರತ್ನರು. ಭಾರತದ ಸಂಸ್ಕೃತಿ-ಗೌರವ ಹೆಚ್ಚಿಸುವ ವ್ಯಕ್ತಿತ್ವಗಳಿಗೆ ಕೇಂದ್ರ ಸರ್ಕಾರವು ಭಾರತ ರತ್ನ ಪ್ರಶಸ್ತಿ ನೀಡುತ್ತಿರುವುದು ಹೊಸದಲ್ಲ. ಭಾರತ ರತ್ನ ಪಡೆದ ಎಲ್ಲ ಮಹನೀಯರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವ ಕೃತಿ ಇದು. ಮಕ್ಕಳಿಗೂ ತಿಳಿಯುವ ಸರಳ ಭಾಷೆಯಲ್ಲಿ ಈ ಕೃತಿ ರಚಿಸಲಾಗಿದೆ. ಇಂದಿರಾ ಗಾಂಧಿ, ನೆಲ್ಸನ್ ಮಂಡೇಲಾ, ಲತಾ ಮಂಗೇಶಕರ್, ಮದರ್ ಥೆರೆಸಾ, ರಾಧಾಕೃಷ್ಣನ್, ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇತರೆ ಗಣ್ಯರ ಕುರಿತು ಮಾಹಿತಿ ನೀಡುತ್ತದೆ.
ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು), ಜನಪದ ಸಂಸ್ಕೃತಿಯ ಮಹಾ ...
READ MORE