ಗಳಗನಾಥ, ವೆಂಕಟರಾವ್ ಆಲೂರು ಹಾಗೂ ವರಕವಿ ಬೇಂದ್ರೆ ಅವರ ಬದುಕು-ಸಾಹಿತ್ಯದ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವೇ ಸಾಹಿತಿ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಗಳಗನಾಥ, ಆಲೂರು ಮತ್ತು ಬೇಂದ್ರೆ’ ಕೃತಿಯ ಜೀವಾಳ.
ಕನ್ನಡ ಪುಸ್ತಕಗಳನ್ನು ತಲೆ ಮೇಲೆ ಹೊತ್ತುಕೊಂಡು ಮಾರಾಟ ಮಾಡುವುದು, ಬಂದ ದುಡ್ಡಿನಿಂದ ಸಾಲ ತೀರಿಸಲು ಹೆಣಗುವುದು, ಮತ್ತೇ ಸಾಲ ಮಾಡಿ ಪುಸ್ತಕ ಪ್ರಕಟಿಸುವುದು ಹೀಗೆ ಕನ್ನಡ ಪುಸ್ತಕಗಳನ್ನೇ ಜೀವಾಳವಾಗಿಸಿ ಕೊಂಡಿದ್ದ ಗಳಗನಾಥ, ಕರ್ನಾಟಕ ಏಕೀಕರಣದ ನೇತೃತ್ವವಹಿಸಿದ್ದ ಸಾಂಸ್ಕೃತಿಕವಾಗಿ ಉತ್ತಮ ನಾಯಕತ್ವದ ಮಾದರಿ ಎನ್ನಬಹುದಾದ ಆಳೂರು ವೆಂಕಟರಾಯರು ಹಾಗೂ ಕನ್ನಡ ನಾಡಿನ ಗ್ರಾಮೀಣ ಸೊಗಡನ್ನು ಕಾವ್ಯದಲ್ಲಿ ಒಡಮೂಡಿಸಿದ ವರಕವಿ ಅಂಬಿಕಾತನಯದತ್ತ- ಈ ಮೂವರನ್ನು ಲೇಖಕರು ಕನ್ನಡದ ಅವತಾರ ಪುರುಷರು ಎಂದು ಕರೆದಿದ್ದು, ಅವರ ವ್ಯಕ್ತಿತ್ವವವನ್ನು ಸುಂದರವಾಗಿ ಚಿತ್ರಿಸಿದ ಕೃತಿ ಇದು.
©2024 Book Brahma Private Limited.