`ಕಾವೇರಿ ಕಣಿವೆಯ ಸ್ವರ್ಗ' ಐತಿಹಾಸಿಕವಾದ ಈ ಕೃತಿಯನ್ನು ಲೇಖಕ ಆದ್ಯ ರಾಮಾಚಾರ್ಯ ರಚಿಸಿದ್ದಾರೆ. ಸಂಗೀತ, ಸಾಹಿತ್ಯ, ಲಲಿತಕಲೆ, ಭರತನಾಟ್ಯ, ಅನೇಕ ಭಾಷೆಗಳಲ್ಲಿ ರಚಿತವಾದ ನಾಟಕಗಳು, ವಿಶ್ವ ಪ್ರಸಿದ್ಧ ಗ್ರಂಥ ಭಂಡಾರಗಳಲ್ಲಿ ಅಪಾರವಾದ ಸೇವೆಗೈದ ಶಹಾಜಿಯ ಮಕ್ಕಳು ಹಾಗೂ ಶಿವಾಜಿಯ ಮಲಸೋದರ ಭೋಸಲೆ ಮನೆತನದವರ ರಾಜ್ಯದ ಇತಿಹಾಸವನ್ನು ಕುರಿತು ಲೇಖಕರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಹಿರಿಯ ಲೇಖಕ ಆದ್ಯ ರಾಮಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ. ತಂದೆ-ಸೇತುರಾಮಾ ಚಾರ್ ಆದ್ಯ, ತಾಯಿ-ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ ಪಡೆದ ಅವರು ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಪಡೆದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿದ್ದ ಅವರು ಹಲವು ಚಳವಳಿಯಲ್ಲಿ ಭಾಗಿಯಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ನಂತರ ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು ಆನಂತರ ಮೈಸೂರಿನ ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸಕ್ಕೆ ಸೇರಿದರು. ಈ ಸಂದರ್ಭದಲ್ಲಿ ...
READ MORE