ನಮ್ಮ ಗುರುಗಳು

Author : ಪಾಟೀಲ ಪುಟ್ಟಪ್ಪ

Pages 128

₹ 80.00




Year of Publication: 2017
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ ರಸ್ತೆ, ಹುಬ್ಬಳ್ಳಿ

Synopsys

ಡಾ. ಪಾಟೀಲ ಪುಟ್ಟಪ್ಪ ಅವರ ಕೃತಿ-ನಮ್ಮ ಗುರುಗಳು. ಹರ್ಡೆಕರ್ ಮಂಜಪ್ಪ, ಆಲೂರು ವೆಂಕಟರಾವ್, ರೆವೆರೆಂಡ್ ಜಾರ್ಜ್ ಕಿಟಲ್, ರಾ.ಹ. ಬಹಾದ್ದೂರ ಸೇರಿದಂತೆ ಕನ್ನಡ ಭಾಷೆ ಹಾಗೂ ಸಾಹಿತ್ಯದ ಉತ್ಕೃಷ್ಟತೆಗೆ ಶ್ರಮಿಸಿದ ಮಹನೀಯರ ವ್ಯಕ್ತಿತ್ವ ಚಿತ್ರಿಸಿರುವ ಕೃತಿ ಇದು. ತಮ್ಮ ಬದುಕಿನ ವಿವಿಧ ಹಂತಗಳಲ್ಲಿ ಪ್ರಭಾವ ಬೀರಿದ ಮಹನೀಯರನ್ನು, ಅವರ ವ್ಯಕ್ತಿತ್ವ ವಿಶೇಷವನ್ನು ಲೇಖಕರು ಪರಿಚಯಿಸಿದ್ದಾರೆ.

About the Author

ಪಾಟೀಲ ಪುಟ್ಟಪ್ಪ
(14 January 1922 - 16 March 2020)

`ಪಾಪು’ ಎಂದೇ ಚಿರಪರಿಚಿತರಿರುವ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡವರು. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದವರು. ತಂದೆ ಸಿದ್ಧಲಿಂಗಪ್ಪ-ತಾಯಿ ಮಲ್ಲಮ್ಮ. 1922ರ ಜನೆವರಿ 4ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು. ‘ವಿಶಾಲ ಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ‘ನವಯುಗ’ ಮಾಸಪತ್ರಿಕೆ ...

READ MORE

Related Books