‘ದೃಶ್ಯಕಲಾವಿದರು’ ಲೇಖಕ ಎನ್. ಮರಿಶಾಮಾಚಾರ್ ಅವರ ಕೃತಿ. ಮೂವತ್ತಾರು ಹಿರಿಯ ಕಲಾವಿದರ ನುಡಿಚಿತ್ರಗಳನ್ನು ಅಳವಡಿಸಲಾಗಿದೆ. ಕೆ.ಕೆ.ಹೆಬ್ಬಾರ್, ಕೆ.ವೆಂಕಟಪ್ಪ, ಎಸ್. ಎಂ.ಪಂಡಿತ್, ಎಸ್.ಎಸ್. ಸ್ವಾಮಿ ಮುಂತಾದ ಕರ್ನಾಟಕ ಕಲಾವಿದರು ಹಾಗೂ ರಾಜಾ ರವಿವರ್ಮ, ನಂದಲಾಲ್ ಬೋಸ್, ಮಜಿಮದಾರ್, ಅಬನೀಂದ್ರನಾಥ ಠಾಕೂರ್, ಎಂ.ಎಫ್. ಹುಸೇನ್ ಮುಂತಾದ ಪ್ರಪಂಚ ಖ್ಯಾತಿಯ ಭಾರತೀಯ ಕಲಾವಿದರು ಸೇರಿದಂತೆ ಜಗತ್ತಿನ ಶ್ರೇಷ್ಠ ಕಲಾವಿದರ ನುಡಿಚಿತ್ರಗಳಿವೆ. ಈ ಬರಹಗಳು ಕಲಾವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಇತರ ಕಲಾಸಕ್ತರಿಗೂ ಉಪಯುಕ್ತವಾಗಿದೆ.
ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್ ಅವರು ಜಯನಗರದ ಆರ್.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...
READ MORE