‘ಇವರು ನಮ್ಮವರು’ ವ್ಯಕ್ತಿ ಚಿತ್ರಣಗಳ ಸಂಕಲನ. ಹಿರಿಯ ಪತ್ರಕರ್ತ ಎಂ. ರಾಘವೇಂದ್ರ ದೇಸಾಯಿ ಈ ಕೃತಿಯನ್ನು ರಚಿಸಿದ್ದಾರೆ. ಸಾಮಾಜಿಕ ಚಿಂತಕರ ಬದುಕು ಸದಾ ಸಮಾಜಮುಖಿಯಾಗಿರುತ್ತದೆ. ಅವರ ಬದುಕು, ಚಿಂತನೆ, ಸಾಧನೆ ಅವರ ಕಾಲದ ನಂತರವೂ ಮುಂದಿನ ಪೀಳಿಗೆಗೆ ಮಾದರಿಯಾಗಿರುತ್ತದೆ. ಅಂತಹ ಸಾರ್ಥಕ ಸಾಧನೆಗೈದ ವ್ಯಕ್ತಿಗಳ ಸಂಕ್ಷಿಪ್ತ ಪರಿಚಯ ಮಾಡಿ, 'ಇವರು ನಮ್ಮವರು' ಎಂಬ ಶೀರ್ಷಿಕೆಯಡಿ ಈ ಕೃತಿಯನ್ನು ಪ್ರಕಟಿಸಿದ್ದಾರೆ.
ಲೇಖಕ ಎಂ. ರಾಘವೇಂದ್ರ ದೇಸಾಯಿ ಅವರು ಮೂಲತಃ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದವರು. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಿಕೋದ್ಯಮದ ಆಸಕ್ತಿಯಿಂದಾಗಿ ನಾಡಿದ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ವಿಜಯವಾಣಿ ಪತ್ರಿಕೆಯ ಕಲಬುರಗಿ ಆವೃತ್ತಿಯ ಹಿರಿಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ...
READ MORE