‘ಹಾನಗಲ್ಲ ಶ್ರೀ ಕುಮಾರ ಶಿವಯೋಗಿ’ ಕೃತಿಯು ಡಾ. ಮೃತ್ಯುಂಜಯ ರುಮಾಲೆ ಅವರು ಗುರುವರ್ಯರ ಕುರಿತು ಬರೆದ ಬರಹಗಳ ಸಂಪಾದಿತ ಸಂಕಲನವಿದು. ಈ ಕೃತಿಯು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಜೀವನ ಚರಿತ್ರೆ - ಕಜ್ಜರಿ ಗುರುಮೂರ್ತಿ ಶಾಸ್ತ್ರಿಗಳು, ಕಾವ್ಯತೀರ್ಥ (ಸ್ಮಾರಕ ಚಂದ್ರಿಕೆ', ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ, ಶಿವಯೋಗಮಂದಿರ-1931), ಕಾರಣಿಕ ಕುಮಾರಯೋಗಿ - ಜ.ಚ.ನಿ. (ಜಗದ್ಗುರು ಚನ್ನಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳು, ನಿಡುಮಾಮಿಡಿ ಸಂಸ್ಥಾನ, ಗೂಳೂರು, ಪ್ರಬೋಧ ಗ್ರಂಥಮಾಲೆ, ಬೆಂಗಳೂರು 1950), ವೀರಶೈವ ಸಮಾಜೋದ್ಧಾರಕರಾದ ಮನ್ನಿರಂಜನ ಪ್ರಣವ- ಸ್ವರೂಪಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಸಂಕ್ಷಿಪ್ತ ಚರಿತ್ರ -ಶ್ರೀ ಮ.ನಿ.ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ ಸಂಸ್ಥಾನಮಠ ಇಲಕಲ್ಲು-ಸವದಿ (ವೀರಶೈವ ಪುಣ್ಯಾಶ್ರಮ ಸಂಗೀತಮಹಾವಿದ್ಯಾಲಯ, ಗದಗ -1957 ಸಹಾಯಕರು : ಶ್ರೀ ವಾಲಿ ಬಸಪ್ಪನವರು, ಜಕ್ಕಲಿ), ಯುಗಪುರುಷ ಯೋಗಿಕುಮಾರ - ಮೂಜಗಂ ( ಮೂರು ಸಾವಿರ ಸಂಸ್ಥಾನಮಠದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು, ಹುಬ್ಬಳ್ಳಿ, ಜಗದ್ಗುರು ಗಂಗಾಧರ ಧರ್ಮಪ್ರಚಾರಕ ಮಂಡಳಿ ಮೂರು ಸಾವಿರ ಸಂಸ್ಥಾನ ಮಠ, ಹುಬ್ಬಳ್ಳಿ;-1978), ಕಾರಣಿಕ ಯುಗಪುರುಷ - ಕುಮಾರ ಮಹಾಶಿವಯೋಗಿಗಳವರು, ಹಾನಗಲ್ಲ - ಮ.ನಿ.ಪ್ರ.ಜ. ಅನ್ನದಾನೇಶ್ವರ ಮಹಾಸ್ವಾಮಿಗಳು ( ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠ, ಮುಂಡರಗಿ-1995), ಹಾನಗಲ್ಲ ಕುಮಾರ ಶಿವಯೋಗಿಗಳು - ಬಿ.ವಿ. ಮಲ್ಲಾಪುರ (ಮಹಾಕವಿ ಹರಿಹರ ಸ್ಮಾರಕ ಸಂಶೋಧನ ಕೇಂದ್ರ, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನಮಠ, ಹಂಪಿ- 2001) ಹೀಗೆ ವಿವಿಧ ಅಧ್ಯಾಗಳನ್ನು ಒಳಗೊಂಡಿದೆ.
©2024 Book Brahma Private Limited.