ಸಿದ್ದವನಹಳ್ಳಿ ಕೃಷ್ಣಶರ್ಮ ಅವರು ಬರೆದ ಕೃತಿ-ಭೂದಾನ ಯಜ್ಞ ಯಾತ್ರೆ. ಮಹಾತ್ಮಗಾಂಧೀಜಿಯ ಪರಮಶಿಷ್ಯ ಎಂದೇ ಖ್ಯಾತಿಯ ವಿನೋಬಾ ಭಾವೆ ಅವರು ಆರಂಭಿಸಿದ ಭೂದಾನ ಯಜ್ಞ ಯಾತ್ರೆ ಸಂಪೂರ್ಣ ಪರಿಚಯ ಇಲ್ಲಿದೆ. ಸರ್ವರಿಗೂ ಭೂಮಿಯಲ್ಲಿ ಪಾಲು ಸಿಗಬೇಕು ಎಂಬುದು ಈ ಚಳವಳಿಯ ಉದ್ದೇಶ. ಭೂದಾನ ಚಳವಳಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಈ ಕೃತಿ ಸಹಕಾರಿಯಾಗಿದೆ. ಭೂದಾನ ಯಾತ್ರೆ ಸಾಗಿದ ಸ್ಥಳಗಳು, ಉಂಟು ಮಾಡಿದ ಪರಿಣಾಮಗಳು, ವ್ಯಕ್ತಿಗಳ ಮಾನಸಿಕ ಪರಿವರ್ತನೆಗಳು ಹೀಗೆ ವಿವಿಧ ಆಯಾಮಗಳ ಮೇಲೆ ಸುಮಾರು 24 ಅಧ್ಯಾಯಗಳಲ್ಲಿ ವಿವರಿಸಲು ಯತ್ನಿಸಿದೆ. ಇಲ್ಲಿ ಬಳಸಲಾದ ಚಿತ್ರಗಳೂ ಐತಿಹಾಸಿಕವಾಗಿ ಮಹತ್ವದ ದಾಖಲೆಗಳಾಗಿವೆ.
ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...
READ MORE