ಬಸವನಾಡಿನ ಬೆಳಕು

Author : ಸಿ.ಎಸ್. ಆನಂದ

Pages 64

₹ 75.00




Year of Publication: 2016
Published by: ಕಾದಂಬರಿ ಪ್ರಕಾಶನ
Address: ಕಲಬುರಗಿ
Phone: 9731826634

Synopsys

ಲೇಖಕ ಸಿ.ಎಸ್. ಆನಂದ ಅವರ ಕೃತಿ-ಬಸವನಾಡಿನ ಬೆಳಕು. ವಿವಿಧ ಧಾರ್ಮಿಕ ಗಣ್ಯರ ಜೀವನ ಸಾಧನೆಯನ್ನು ಬಣ್ಣಿಸಿದ್ದಾರೆ. ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಅವರು ಮುನ್ನುಡಿ ಹಾಗೂ ವಿಮರ್ಶಕ ಡಾ. ಚನ್ನಪ್ಪ ಕಟ್ಟಿ ಬೆನ್ನು ಡಿ ಬರೆದಿದ್ದಾರೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ವಿರಕ್ತ ಮಠದ ಭವ್ಯ ಪರಂಪರೆಯನ್ನು, ಜ್ಞಾನದಾಸೋಹಿ ಪರಮಪೂಜ್ಯ ಶ್ರೀ ಬಂಥನಾಳ ಸಂಗನಬಸವ ಶಿವಯೋಗಿಗಳು, ತ್ರಿಕಾಲಜ್ಞಾನಿ ಪರಮಪೂಜ್ಯ ಶ್ರೀ ದಯಾನಂದ ಶಿವಯೋಗಿಗಳು ಹಾಗೂ ಸದ್ಯದ ಶ್ರೀಮಠದ ಪೀಠಾಧಿಕಾರಿ ಕಾಯಕಯೋಗಿ ಪರಮಪೂಜ್ಯ ಶ್ರೀ ಗುರು ಸಂಗನಬಸವ ಮಹಾಸ್ವಾಮಿಗಳ ಕುರಿತ ಚಿತ್ರಣಗಳಿವೆ.  ಗುರುಗಳ ಸಂಪರ್ಕದಲ್ಲಿದ್ದು, ಅವರ ಸ್ವಭಾವ, ಜೀವನ ಶೈಲಿ, ಸಾಧನೆ ಮತ್ತು ಸಿದ್ದಿಗಳನ್ನು ತುಂಬಾ ಹತ್ತಿರದಿಂದ ಕಂಡು, ಅನುಭವಿಸಿ, ಆತ್ಮೀಯವಾಗಿ ಅಕ್ಷರ ರೂಪದಲ್ಲಿ ಅನಾವರಣಗೊಳಿಸಿದ ನುಡಿ ಚಿತ್ರಣ ಇದಾಗಿದೆ.

ಎರಡನೇ ಭಾಗದಲ್ಲಿ ಆ ಪೂಜ್ಯರ ಚಿತ್ರಣವನ್ನು ಜಾನಪದ ತ್ರಿಪದಿಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಇದು ಜಾನಪದ ತ್ರಿಪದಿಗಳ ಸಂಕಲನವೂ ಹೌದು. ಅವರಿಗೆ ತ್ರಿಪದಿಯ ಲಯವೂ ಚನ್ನಾಗಿ ಒಲಿದಿದೆ ಎನ್ನುವುದಕ್ಕೆ ಈ ಕೃತಿಯೇ ಉತ್ತಮ ನಿದರ್ಶನ. ಒಂದರ್ಥದಲ್ಲಿ ಈ ಕೃತಿ ಗದ್ಯ ಪದ್ಯಗಳ ಮಿಶ್ರಣದ ಚಂಪೂವಿನಂತೆ ಇದೆ. ಪೂಜ್ಯರ ಅಸಾಮಾನ್ಯ, ಅಪರೂಪದ ವ್ಯಕ್ತಿತ್ವವನ್ನು "ಬಸವನಾಡಿನ ಬೆಳಕು" ಕೃತಿ ಚೆನ್ನಾಗಿ ಚಿತ್ರಿಸುತ್ತದೆ.

 

About the Author

ಸಿ.ಎಸ್. ಆನಂದ

ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು:  ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...

READ MORE

Related Books