ಹಿರಿಯ ಸಾಹಿತಿ ಶೇಷನಾರಾಯಣ ಅವರ ಕೃತಿ- ಮುದ್ರಕನ ಸಾಹಿತ್ಯ ನಂಟು. ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯದೇ ಉಪಜೀವನಕ್ಕಾಗಿ ಮುದ್ರಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಲೇಖಕರು, ತಮ್ಮ ಕೆಲದ ಜೊತೆಗೆ ಹೆಸರಾಂತ ಸಾಹಿತಿಗಳ ಸಾಹಿತ್ಯ, ಅವರ ಪರಿಚಯ ಹೊಂದುತ್ತಲೇ ಪ್ರಕಾಶಕರಾಗಿಯೂ ತಮ್ಮ ಭವಿಷ್ಯ ರೂಪಿಸಿಕೊಂಡವರು. ಮಾತ್ರವಲ್ಲ; ಈವರೆಗೆ 1500 ಕ್ಕೂ ಅಧಿಕ ಕೃತಿಗಳನ್ನು ಪ್ರಕಾಶಿಸಿದ್ದು, ಇವರ ಸಾಹಿತ್ಯಕ ಅಧ್ಯಯನದ ಆಳ ಹಾಗೂ ಸಾಹಿತ್ಯಕ ಅನುಭವದ ವಿಸ್ತಾರವನ್ನು ಗಮನಿಸಬಹುದು.
ಮುದ್ರಕನ ಸಾಹಿತ್ಯ ನಂಟು -ಈ ಕೃತಿಯಲ್ಲಿ ಕನ್ನಡದ ಕುವೆಂಪು, ಡಿವಿಜಿ, ತ್ರಿವೇಣಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅನಕೃ, ಬಿ.ವಿ.ಕಾರಂತ ಹೀಗೆ ವಿವಿಧ ಹೆಸರಾಂತ ಕವಿ-ಚಿಂತಕರನ್ನು ತಮ್ಮದೇ ಆದ ಶೈಲಿಯಲ್ಲಿ ಪರಿಚಯಿಸಿದ ಕೃತಿ ಇದು.
ಪ್ರಸಿದ್ಧ ಕತೆಗಾರ, ಬರಹಗಾರರಾದ ಶೇಷನಾರಾಯಣರು ಹುಟ್ಟಿದ್ದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ. ತಂದೆ ಬಿ.ವಿ. ಸುಬ್ರಹ್ಮಣ್ಯ, ತಾಯಿ ಕಾವೇರಮ್ಮ. ಓದಿದ್ದು ನಾಲ್ಕನೆಯ ತರಗತಿವರೆಗೆ. ಶಾಲಾ ಕಾಲೇಜು ಸೇರಿ ಅಲ್ಲಿನ ಜೀವನವನ್ನು ಅನುಭವಿಸಬೇಕಿದ್ದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದು, ಪಡೆದದ್ದು ಇಡೀ ಭಾರತ ದರ್ಶನ. ತಿರುಪತಿ ತಿಮ್ಮಪ್ಪನ ಫೋಟೋ ಮಾರಾಟ, ಅಷ್ಟೇಕೆ ಗಾರೆ ಕೆಲಸ, ರೈಲುಬಸ್ಸು ನಿಲ್ದಾಣಗಳಲ್ಲಿ ಹೊರೆಹೊತ್ತ ಕೂಲಿಯಾಗಿ, ಇವರಿಗೇ ತಿಳಿಯದೆ ಅದೆಷ್ಟು ಸಾಹಿತಿಗಳ ಹೊರೆ ಹೊತ್ತಿದ್ದಾರೋ ? ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿ ಹೀಗೆ ಒಂದೇ, ಎರಡೇ . ಭಾರತವೆಲ್ಲಾ ಸುತ್ತಿ ಗಂಗೆ, ನರ್ಮದೆ, ...
READ MORE