ಕನ್ನಡವನ್ನು ಕಟ್ಟಿ ಬೆಳೆಸಿದ ಹಲವು ಹತ್ತು ಜನರಲ್ಲಿ ಹದಿನೆಂಟು ಜನ ಕವಿ, ಸಾಹಿತಿಗಳನ್ನು ಪರಿಚಯಿಸುವ ಕೃತಿ ‘ಕನ್ನಡದ ಪೋಷಕರು’. ಮುಂಬೈಯ ಕನ್ನಡ ದಿನಪತ್ರಿಕೆ ‘ಕರ್ನಾಟಕ ಮಲ್ಲ’ದಲ್ಲಿ ಅಂಕಣ ಬರೆಹಗಳಾಗಿ ಮೂಡಿಬಂದ ಲೇಖನಗಳಲ್ಲಿ ಹದಿನೆಂಟನ್ನು ಅಣಿಗೊಳಿಸಿ ಪ್ರಸ್ತುತ ಕೃತಿಯಲ್ಲಿ ಪ್ರಕಟಿಸಲಾಗಿದೆ. ಈಶ್ವರ ಸಣಕಲ್ಲ, ಡಾ.ಡಿ.ಎಸ್. ಕರ್ಕಿ, ಅ.ನ.ಕೃ, ಜಿ.ಪಿ. ರಾಜರತ್ನಂ, ಕೃಷ್ಣಕುಮಾರ ಕಲ್ಲೂರ, ದಿನಕರ ದೇಸಾಯಿ, ರಾವ್ ಬಹಾದ್ದೂರ್, ಸಂ.ಶಿ. ಭೂಸನೂರಮಠ, ಜಯಲಕ್ಷ್ಮಿ ಶ್ರೀನಿವಾಸ್, ಜಯದೇವಿತಾಯಿ ಲಿಗಾಡೆ, ಕವಿ ಎಸ್.ಡಿ. ಇಂಚಲ, ಎನ್ಕೆ, ಎಸ್.ವಿ. ಪರಮೇಶ್ವರ ಭಟ್, ಭಾರತೀಸುತ, ಕೆ.ಎಸ್. ನರಹಿಂಹಸ್ವಾಮಿ, ಎಚ್.ಎಲ್. ನಾಗೇಗೌಡ, ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ಪರಿಚಯ ಈ ಕೃತಿಯಲ್ಲಿದೆ.
ಗುರುನಾಥ ಧುಂಡಭಟ್ಟ ಜೋಶಿ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿಯವರು. (ಜನನ: 20 -08-1933) ತಂದೆ ಧುಂಡಭಟ್ಟ, ತಾಯಿ ರಮಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಳ್ಳಟ್ಟಿ, ಸೂರಣಗಿಯಲ್ಲಿ ನಡೆಯಿತು. ಮುಂಬಯಿಯ ರಾಮನಾರಾಯಣ ರೂಯಾ ಕಾಲೇಜಿನಿಂದ ಬಿ.ಎ, ಮುಂಬಯಿ ವಿ.ವಿ.ಯಿಂದ ಎಂ.ಎ, ಸೇಂಟ್ ಝೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್‌ನಿಂದ ಬಿ.ಎಡ್, ಪದವೀಧರರು. “ಹುಯಿಲಗೋಳ ನಾರಾಯಣರಾಯರ ಜೀವನ ಸಾಧನೆ” ಇವರ ಪಿಎಚ್ ಡಿ ಮಹಾಪ್ರಬಂಧ. ಪ್ರೌಢಶಾಲಾ ಶಿಕ್ಷಕರಾಗಿ ಹಂತಹಂತವಾಗಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ, ಯಂಗ್ ಮೆನ್ಸ್ ಹೈಸ್ಕೂಲು ನಂತರ ರೂಪರೇಲ್ ಮತ್ತು ಝನ್‌ಝನ್ ವಾಲಾ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಝನ್‌ಝನ್ ಕಾಲೇಜಿನ ...
READ MORE