ಲೇಖಕ ಸೊಂದಲಗೆರೆ ಲಕ್ಷ್ಮಿಪತಿ ಅವರು ಮಹಾತ್ಮರ ಜೀವನ ಚಿತ್ರಣವನ್ನು ಕಟ್ಟಿಕೊಟ್ಟ ಕೃತಿ-ಜಗತ್ತಿನ ಉದಾತ್ತ ಚಿಂತಕರು. ಮಹಾತ್ಮಗಾಂಧೀಜಿ, ಕಾರ್ಲ್ ಮಾಕ್ಸ್, ರಾಮಕೃಷ್ಣ, ಭಗವಾನ್ ಬುದ್ಧ, ಗುರುನಾನಕ, ಏಸುಕ್ರಿಸ್ತ ಹೀಗೆ ಪಾಶ್ಚಾತ್ಯ ಚಿಂತಕರು, ಧರ್ಮ ಜಿಜ್ಞಾಸುಗಳನ್ನು ಪರಿಚಯಿಸಿದ್ದಾರೆ. ಇವರೆಲ್ಲರೂ ಒಂದೊಂದು ಭೂ ಪ್ರದೇಶ ಅಥವಾ ಒಂದೊಂದು ಧರ್ಮಕ್ಕೆ ಸೇರಿದವರಾಗಿದ್ದರೂ ಅವರೆಲ್ಲರೂ ಮಾನವೀಯತೆಯನ್ನೇ ಪ್ರತಿಪಾದಿಸಿದವರು. ಮನುಕುಲದ ಒಳಿತಿಗೆ ಜೀವನ ಮುಡುಪಾಗಿಟ್ಟವರ ಬದುಕು, ‘ಹೀಗೆ ಇತರರು ಇರಬೇಕು’ ಎಂಬಷ್ಟು ಮಾದರಿ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿಯಾದರೂ ಸುಂದರವಾಗಿ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.
ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...
READ MORE