ಖ್ಯಾತ ಸಾಹಿತಿ ತ.ರಾ.ಸು ಅವರು ಖ್ಯಾತ ಕಾದಂಬರಿಕಾರ ಅ.ನ.ಕೃ. ಕುರಿತು ಬರೆದ ಕೃತಿಯೇ-ಅ.ನ.ಕೃ. ಮಾಧ್ಯಮಿಕ ಶಾಲೆ ಓದುತ್ತಿರುವಾಗಲೇ ತ.ರಾ.ಸು ಅವರು ಅ.ನ.ಕೃಷ್ಣರಾಯರ ಕಾದಂಬರಿ ಹಾಗೂ ಬರೆಹಗಳಿಂದ ಪ್ರಭಾವಿತರಾದವರು. ಈ ಕೃತಿಯಲ್ಲಿ ಅ.ನ.ಕೃ ಅವರ ಸಾಹಿತ್ಯಕ ಬರವಣಿಗೆ, ಕಾದಂಬರಿಯ ವಸ್ತು ವೈವಿಧ್ಯತೆ , ವಿಮರ್ಶಾತ್ಮಕ ದೃಷ್ಟಿಕೋನ ಎಲ್ಲವುಗಳ ಕ್ಷ-ಕಿರಣದ ಬರೆಹಗಳಿವೆ ಮಾತ್ರವಲ್ಲ; ಅ.ನ.ಕೃ ಬದುಕು-ವ್ಯಕ್ತಿತ್ವ ಸಹ ಇಲ್ಲಿ ಚಿತ್ರಿಸಲಾಗಿದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE