ಕನ್ನಡ ನಾಡು -ನುಡಿ ಚಿಂತಕ ಎಸ್.ಜಿ. ನರಸಿಂಹಾಚಾರ್ ರಚಿಸಿದ ಕೃತಿ-ಭಾರತ ವೀರ ಚರಿತ. ಬೆಂಕಿಗೆ ಸಿಕ್ಕಿ ಬದುಕಿದವಳು, ಬಾದಷಹಾನ ಪತ್ನಿ, ಬಳೆಯ ಬಂಧುತ್ವ, ವೀರನಾರಿ, ಹಜಾರತ್ತಿನ ಪದ್ಮರಾಗ, ಕಮಲಾವತೀ ಕಲ್ಯಾಣ, ದೇಶಭ್ರಷ್ಟ, ಸೈನಿಕನ ಸೌಭಾಗ್ಯ, ಕಳೆದುಕೊಂಡ ಕೈ ಪೆಟ್ಟಿಗೆ ಹೀಗೆ 9 ಜನ ವೀರರ ಕಥೆಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಪ್ರತಿ ವ್ಯಕ್ತಿಯ ಕಥೆಯು ತನ್ನ ವಿಷಯ ವಸ್ತು ಹಾಗೂ ಜೀವನ ಮೌಲ್ಯಗಳಿಂದ ಓದುಗನನ್ನು ಆಕರ್ಷಿಸುತ್ತದೆ.
ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು. ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು. ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...
READ MORE