ಕನ್ನಡ ಸಾಹಿತ್ಯಕ್ಕೆ 2500 ವರ್ಷಗಳ ಇತಿಹಾಸವಿದ್ದರೆ ಕನ್ನಡ ಮಕ್ಕಳ ಸಾಹಿತ್ಯಕ್ಕೆ 150 ವರ್ಷಗಳಷ್ಟು ಚಿಕ್ಕದಾದ ಇತಿಹಾಸವಿದೆ. ಇಷ್ಟು ಚಿಕ್ಕ ಅವಧಿಯಲ್ಲಿ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಅಪಾರವಾಗಿ ಬೆಳೆದು ಬಂದಿತು. ಕನ್ನಡ ಚಿಣ್ಣರ ಮನಸ್ಸನ್ನು ತಣಿಸಿತು. ಪ್ರಾರಂಭದಲ್ಲಿ ಮಕ್ಕಳ ಸಾಹಿತ್ಯ ರಚಿಸುವಲ್ಲಿ ಮನಸ್ಸು ಮಾಡಿದ ಚ. ವಾಸುದೇವಯ್ಯ, ಪಂಜೆ ಮಂಗೇಶರಾಯ, ಹೊಯ್ಸಳ, ರೆವರೆಂಡ್ ಎಫ್. ಎಂ. ಕಿಟ್ಟಲ್, ಶಂಭುಲಿಂಗಪ್ಪ ಶಿವರುದ್ರಪ್ಪ ಕುಲಕರ್ಣಿ, ಪಂಡಿತ ಚ. ಎ. ಕವಲಿ, ಡೆಪ್ಯೂಟಿ ಚನ್ನಬಸಪ್ಪ, ವೆಂಕಟೇಶ ರಂಗೋಕಟ್ಟಿ, ಶಿವರಾಮ ಕಾರಂತ, ಜಿ. ಪಿ. ರಾಜರತ್ನಂ, ಬಿ. ಶ್ರೀ, ಪಾಂಡುರಂಗರಾವ್, ಸಿಂಪಿ ಲಿಂಗಣ್ಣ, ಮಿರ್ಜಿ ಅಣ್ಣಾರಾಯ, ಎಂ. ಎನ್. ಕಾಮತ್, ಮೇವುಂಡಿ ಮಲ್ಲಾರಿ, ದಿನಕರ ದೇಸಾಯಿ, 'ಸಿಸು' ಸಂಗಮೇಶ, ಶಂ.ಗು.ಬಿರಾದಾರ ಇವರೆಲ್ಲರೂ ಶಾಲಾ ಶಿಕ್ಷಕರು, ಮಕ್ಕಳಿಗಾಗಿ ಬರೆದವರು. ಕನ್ನಡದಲ್ಲಿ ಮಕ್ಕಳ ಸಾಹಿತ್ಯವೂ ಒಂದು ಇದೆ ಎಂದು ತೋರಿಸಿ ಕೊಟ್ಟು ಮಕ್ಕಳ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದವರು.
©2024 Book Brahma Private Limited.