ಜಾನಪದ ತಲೆಮಾರು ಕೃತಿಯು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಪರಿಚಯಿಸುವ ನಿಟ್ಟಿನಲ್ಲಿ ರಚನೆಗೊಂಡ ಕೃತಿಯಾಗಿದೆ. ಒಟ್ಟು ನಾಲ್ಕು ಸಂಪುಟಗಳಲ್ಲಿ ಈ ಕೃತಿಯು ರಚನೆಯಾಗಿದ್ದು, ಇದು ಮೊದಲನೇ ಸಂಪುಟವಾಗಿದೆ. ತಲೆಮಾರುಗಳಾಗಿ ಲೇಖಕರನ್ನು ವಿಂಗಡಿಸಿ ಅವರ ಬರೆಹಗಳ ಕುರಿತು ಕೃತಿಯಲ್ಲಿ ನೀಡಲಾಗಿದೆ. ಕ್ರೈಸ್ತ ಮಿಷನರಿ, ವಿ.ಎನ್. ನರಸಿಂಹಯ್ಯಂಗಾರ್, ರಾವ್ ಬಹದ್ದೂರ್ ಸಿ. ಹನುಮಂತೇಗೌಡ, ಎಂ.ಎಲ್. ಶ್ರೀಕಂಠೇಶಗೌಡ, ನಡಿಕೇರಿಯಂಡ ಚಿಣ್ಣಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರಹ್ಲಾದ ನರೆಗಲ್ಲ, ಬೆಟಗೇರಿ ಕೃಷ್ಣಶರ್ಮ, ಹಲಸಂಗಿ ಗೆಳೆಯರು, ಸಿಂಪಿ ಲಿಂಗಣ್ಣ, ದ.ರಾ. ಬೇಂದ್ರೆ, ಕುವೆಂಪು, ತೀ.ನಂ. ಶ್ರೀಕಂಠಯ್ಯ, ಅರ್ಚಕ ವಿ. ರಂಗಸ್ವಾಮಿ ಭಟ್ಟ, ವಿಠೋಬ ವೆಂಕನಾಯಕ ತೊರ್ಕೆ, ಬೇಕಲ ರಾಮನಾಯಕ, ಮುಂತಾದವರ ಪರಿಚಯ, ಅವರ ಬರಹಗಳ ಪರಿಚಯವನ್ನು ಈ ಕೃತಿಯಲ್ಲಿ ಮಾಡಿಕೊಡಲಾಗಿದೆ. ಹಿ.ಶಿ. ರಾಮಚಂದ್ರೇಗೌಡ ಮತ್ತು ಚಕ್ಕೆರೆ ಶಿವಶಂಕರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ...
READ MORE