ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ಕೃತಿ-ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳು. ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕನ್ನಡದ ಸಾಹಿತಿಗಳೇ ಆಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ, ಯು.ಆರ್. ಅನಂತಮೂರ್ತಿ, ಗಿರಿಶ ಕಾರ್ನಾಡ, ಚಂದ್ರಶೇಖರ ಕಂಬಾರ ಹೀಗೆ ಕನ್ನಡದ 8 ಜನ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇವರ ಬದುಕು-ಸಾಹಿತ್ಯಕ ಸಾಧನೆ. ವಿಚಾರ-ಚಿಂತನೆಗಳ ವೈಖರಿಗಳನ್ನು ಕಟ್ಟಿಕೊಡುವ ಕೃತಿ ಇದು. ಭಾರತೀಯ ಜ್ಞಾನಪೀಠ ಪ್ರಶಸ್ತಿ ಕುರಿತಂತೆ ಒಂದು ಅಧ್ಯಾಯವನ್ನೂ ಸಹ ಈ ಕೃತಿಯ ಕೊನೆಗೆ ನೀಡಲಾಗಿದೆ.
©2025 Book Brahma Private Limited.