ಸಾಹಿತಿ ಗೌರೀಶ ಕಾಯ್ಕಿಣಿ ಅವರು ಬರೆದ ಕೃತಿ-ಪಾಶ್ಚಿಮಾತ್ಯ ಮಹಾಪುರುಷರು. ಸಂಸ್ಕೃತಿ ಚಿಂತಕರೇ ಆಯಾ ದೇಶದ ಮಹಾನುಭಾವರು. ಈ ನಿಟ್ಟಿನಲ್ಲಿ ಪಾಶ್ಚಾತ್ಯ ಮಹಾನುಭಾವರು ಜಾಗತಿಕ ಸಾಹಿತ್ಯ-ಸಂಸ್ಕೃತಿ ಮೇಲೆ ತುಂಬಾ ಪ್ರಭಾವ ಬೀರಿದ್ದಾರೆ. ಆದ್ದರಿಂದ, ಅಲ್ಲಿಯ ರಾಜನೀತಿಜ್ಞರು, ವಿಜ್ಞಾನಿಗಳು, ತತ್ವಜ್ಞಾನಿಗಳು, ಕಲಾಕಾರರು, ಸಾಹಿತಿಗಳು ಹೀಗೆ ವಿವಿಧ ವಲಯದ ಮಹಾಪುರುಷರನ್ನು ಆಯ್ದು ಅವರ ಬದುಕು, ಸಾಹಿತ್ಯ ಮತ್ತು ಸಾಹಸಗಳನ್ನು ನೀಡಲಾಗಿದೆ. ತತ್ವ ಪ್ರತಿಭೆ ವಿಭಾಗದಲ್ಲಿ ಸಾಕ್ರೆಟಿಸ್, ಅರಿಸ್ಟಾಟಲ್, ಮೆಕಿಯಾವಲ್ಲಿ, ಕಲೆಯಲ್ಲಿ ಡೆಮೊಸ್ತೆಜೀಜ್, ಲಿಯೋನಾರ್ಡೊ ಡಾವಿಂಚಿ, ಮೈಕಲೆಂಜಿಲೋ, ಕ್ರಾಂತಿಯಲ್ಲಿ ರೂಸೋ, ವಾಲ್ಟೇರ್, ಡಾರ್ವಿನ್, ವಿಜ್ಞಾನದಲ್ಲಿ ಲೂಯಿಸ್ ಪಾಶ್ಚರ್, ನ್ಯೂಟನ್, ಥಾಮಸ್ ಎಡಿಸನ್, ಕಾವ್ಯ ವಿಭಾಗದಲ್ಲಿ ಜಾನ್ಸನ್, ಶೆಲ್ಲಿ, ಬೈರನ್, ರಾಜಕಾರಣದಲ್ಲಿ ಅಬ್ರಾಹಂ ಲಿಂಕನ್, ಗ್ಯಾರಿಬಾಲ್ಡಿ, ಬಿಸ್ಮಾರ್ಕ್ ಹೀಗೆ ವಿವಿಧ ವಲಯಗಳ ಗಣ್ಯರ ಸಾಧನೆಗಳನ್ನು ವಿವರಿಸಲಾಗಿದೆ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE