ಭಾರತದ ವೀರ ರಮಣಿಯರು-ಕೃತಿ ರಚನೆಕಾರರು ಕೃಷ್ಣಮೂರ್ತಿ ನಾಡಿಗ. ಕೃತಿಯು ಈ ಮೊದಲು 1946 ಹಾಗೂ 1951 ಹೀಗೆ ಎರಡು ಬಾರಿ ಮುದ್ರಣ ಕಂಡಿತ್ತು. ಕಮಲಾ ನೆಹರೂ, ಸರೋಜಿನಿ ನಾಯ್ಡು, ಕಸ್ತೂರ ಬಾ ಹಾಗೂ ವಿಜಯಲಕ್ಷ್ಮಿ ಪಂಡಿತ್ ಹೀಗೆ ನಾಲ್ವರು ವೀರ ಮಹಿಳೆಯರು ಎಂದು ಲೇಖಕರು ಅವರ ಜೀವನದ ಚಿತ್ರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ದೇಶಾಭಿಮಾನವನ್ನೇ ಧರಿಸಿದ ಈ ನಾಲ್ವರು ವೀರ ಮಹಿಳೆಯರು ದೇಶದ ಸ್ವಾತಂತ್ಯ್ರದಲ್ಲಿ ತಮ್ಮದೇ ಮಿತಿಯಲ್ಲಿ ಕೊಡುಗೆ ನೀಡಿದ್ದಾರೆ. ಆಗಾಗ ಬರುವ ಕಷ್ಟ ಕೋಟಲೆಗಳನ್ನು, ಟೀಕೆಗಳನ್ನು ಎದುರಿಸಿ ಪುರುಷರಿಗಿಂತಲೂ ಒಂದು ಹೆಜ್ಜೆ ಮುಂದೆ ಎಂಬಂತೆ ದೇಶಭಕ್ತರಿಗೆ ಮಾರ್ಗದರ್ಶನ ಮಾಡಿದ್ದು ಮಾತ್ರವಲ್ಲ, ಸ್ವತಃ ತಾವೇ ಮುಂದಾಗಿ ಚಳವಳಿಗಳನ್ನು ನಡೆಸಿದ್ದನ್ನು ಕಾಣಬಹುದು. ಗಾಂಧೀಜಿಯ ದೊಡ್ಡ ವ್ಯಕ್ತಿತ್ವ ಮುಂದೆ ಇಂತಹ ಮಹಿಳೆಯರ ದೇಶ ಸೇವೆಯನ್ನು ಗಮನಿಸಿ ಕನ್ನಡಿರ ಮುಂದೆ ಇಟ್ಟ ಸಂಪಾದಕರ ಶ್ರಮ ಮೆಚ್ಚುವಂತಹದ್ದು ಎಂದು ಸಾಹಿತಿ ಸಿ.ಕೆ.ವೆಂಕಟರಾಮಯ್ಯ ಅವರು ಮುನ್ನುಡಿ ಬರೆದು ಪ್ರಶಂಸಿಸಿದ್ದಾರೆ.
ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ (ಜನನ: 1921) ಡಾ.ನಾಡಿಗ ಕೃಷ್ಣಮೂರ್ತಿ ಜನಿಸಿದರು.ತಂದೆ ನರಸಿಂಗರಾವ್ ನಾಡಿಗ, ತಾಯಿ ಕಮಲಾಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ನಂತರ ಕಾಲೇಜಿಗೆ ಸೇರಿದರು. ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮ ಶಿಕ್ಷಣ ನಂತರ ಅವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ‘ಪತ್ರಿಕೋದ್ಯಮದ ಹುಟ್ಟು,ಬೆಳವಣಿಗೆ ಮತ್ತು ಅಭಿವೃದ್ಧಿ’ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು. ವಿದೇಶಿ ವಿದ್ಯಾಲಯಗಳಿಗೆ ಅವರು ಸಂದರ್ಶಕ ಅಧ್ಯಾಪಕರಾಗಿ ಅನೇಕ ಉಪನ್ಯಾಸಗಳನ್ನು ಮಾಡಿದ್ದಾರೆ. ‘ಮಾನಸ ಗಂಗೋತ್ರಿ’ ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ. ಕರ್ನಾಟಕ ಪತ್ರಿಕಾ ಅಕಾಡೆಮಿಗೆ ಪ್ರಥಮ ...
READ MORE