‘ಸಹಾಭಾಷಿಕರ ಕನ್ನಡ ಪ್ರೇಮ’ ಡಿ. ಎಸ್. ಶ್ರೀನಿವಾಸ ಪ್ರಸಾದ್ ಅವರ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಸಕಲ ಭಾಷಾಮಯೀ ಸರಸ್ವತಿ ಸರ್ವಭಾಷಾಮಯೀ ಸರಸ್ವತೀ ಎನ್ನುವ ಮಾತಿದೆ. ಇದೇ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ನಾಡು ನುಡಿಗಳ ಜಗತ್ತಿಗೆ ತಮ್ಮ ಮನೆಯ, ಕುಟುಂಬದ ಭಾಷೆ ಬೇರೆ ಆಗಿದ್ದರೂ ಕನ್ನಡಕ್ಕೆ ಅನೇಕರು ದಣಿವರಿಯದೆ ಜೀವ ತೇಯ್ದಿದ್ದಾರೆ. ಅಂಥ 101 ಮಹಾನುಭಾವರ ಬಗ್ಗೆ ರಚಿಸಿರುವ ಕೃತಿಯೇ ಸಹಭಾಷಿಕರ ಕನ್ನಡ ಪ್ರೇಮ. ಇಲ್ಲಿ ಯಾವುದೂ, ಯಾರೂ ಅನ್ಯರಲ್ಲ, ಎಲ್ಲವೂ ಸಹಭಾಷೆಗಳೇ, ಎಲ್ಲರೂ ಸಹಭಾಷಿಕರೇ.
ಡಿ.ಎಸ್.ಶ್ರೀನಿವಾಸ ಪ್ರಸಾದ್ ಅವರು ಮೂಲತಃ ಬೆಂಗಳೂರಿನವರು. ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡಿದ್ದ ಶ್ರೀನಿವಾಸ ಪ್ರಸಾದ್ ಅವರು 10 ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ ಒಗ್ಗಟ್ಟಿನಲ್ಲಿ ಬಲವಿದೆ, ಸಮುದ್ರದಲ್ಲಿ ಆಹಾರ ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಕಲೆ, ಸಂಸ್ಕೃತಿ, ವಿಜ್ಞಾನ ಸಾಮಾಜಿಕ, ಚಿತ್ರರಂಗಗಳ ಕುರಿತು 33 ವರ್ಷದಿಂದ ಒಟ್ಟು 1000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದು ಇಂಗ್ಲಿಷ್ ನಲ್ಲೂ 250ಲೇಖನಗಳನ್ನು ಬರೆದಿದ್ದಾರೆ. ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ , ಬೀchi ವಿದ್ಯಾಕೇಂದ್ರದ ಪ್ರಶಸ್ತಿ, ಪ್ರತಿಭಾಶ್ರೀ ಪ್ರಶಸ್ತಿ,ಕಲಾಶ್ರೀ ಪ್ರಶಸ್ತಿ ಕೃತಿಗಳು: ಸಿನಿಪಯಣ, ವಿಶ್ವಶಕ್ತಿ ವಿವೇಕಾನಂದ ,ಸಮಾಜವೆಂದರೆ ಹೀಗೆ ನಮ್ಮ ನಿಮ್ಮ ...
READ MORE