ಚೀನಾ ದೇಶದ ಋಷಿ ಎಂದೇ ಖ್ಯಾತಿಯ ಕಾಂಪೂಷನ್ ಅವರ 174 ವಚನಗಳ ಸಂಗ್ರಹ. ಆಯ್ದ ವಚನಗಳನ್ನು ಲೇಖಕ ಜಿ.ಪಿ. ರಾಜರತ್ನಂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 6ನೇ ಶತಮಾನದಲ್ಲಿ ಚೀನಾದಲ್ಲಿ ಜನತೆಯನ್ನು ಧರ್ಮ ಪಥದಲ್ಲಿ ನಡೆಸಲು ಪ್ರೇರಣೆಯಾದ ಕಾಂಪೂಷ್ ಚೀನಾ ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆದಿದ್ದಾನೆ. ಆತನ ವ್ಯಕ್ತಿತ್ವವನ್ನು ಬಣ್ಣಿಸುವ ಕೆಲ ಸಂವಾದಗಳು, ಲಘು ಆಖ್ಯಾನಗಳು, ಬೋಧೆಗಳು, ಜೀವನ ಉದ್ದೇಶಗಳ ನುಡಿಗಳು, ಇವೆಲ್ಲವೂ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಕಾಂಪೂಷನ ವಚನಗಳು, ಕಾಂಪೂಷ ವಚನ ಸಂಗ್ರಹ, ಅಧಿಮಾನವ ಕಾಂಪೂಷ ಹಾಗೂ ಧರ್ಮ ಸಂಸ್ಥಾಪನಾರ್ಥಾಯ.. ಹೀಗೆ ಸಂಕಲನದಲ್ಲಿ ಒಟ್ಟು 4 ಚಿಂತನಗಳಿವೆ. ಇವು ಜೀವನ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE