‘ಆಡಳಿತದ ನೋಟಗಳು’ ಪ್ರೊ. ಎಂ. ಜಿ. ರಂಗಸ್ವಾಮಿ ಅವರ ಕೃತಿಯಾಗಿದ್ದು, ಬ್ರಿಟಿಷ್ ಇಂಡಿಯಾದ ಮೈಸೂರು ದೇಶದಲ್ಲಿ ಕಂಪನಿ ಸರ್ಕಾರದ ಉನ್ನತ ಮಟ್ಟದ ಪ್ರಜಾಸೇವಕನಾಗಿದ್ದ ಆರ್.ಎಸ್. ಡಾಬ್ಸ್ ಇವರ ಆಡಳಿತದ ಕುರಿತಾದಂತಹ ವಿವರಣೆಗಳನ್ನೊಳಗೊಂಡಿದೆ. ಐಗ್ಲೆಂಡ್‌ನ ಪ್ರಜೆ ರೆವರೆಂಡ್ ರಿಚರ್ಡ್ ಸ್ಟೀವರ್ಟ್ ಡಾಬ್ಸ್ ಮತ್ತು ಹ್ಯಾರಿಯೆಟ್ ಮೆಕಾಲೆ(ಡಾಬ್ಸ್) ದಂಪತಿಯ ಪುತ್ರನಾದ ಇವರು ಮೇ 10, 1808ರಂದು ಜನಿಸಿದರು. ಈತ ಚಿತ್ರದುರ್ಗ ವಿಭಾಗದ ಪ್ರಥಮ ಕಮಿಷನರ್(ಸೂಪರಿಂಟೆಂಡೆಂಟ್) (1835-1860). ಡಾಬ್ಸ್ ಆಡಳಿತದ ಚುಕ್ಕಾಣಿ ಹಿಡಿದಾಗ ರಾಜ್ಯದಲ್ಲಿ ಅರಾಜಕ ಪರಿಸ್ಥಿತಿ ತಾಂಡವವಾಡುತ್ತಿತ್ತು. ಕಳ್ಳಕಾಕರ, ಕಾಡುಪ್ರಾಣಿಗಳ, ನೂರಾರು ಸಂಖ್ಯೆಯಲ್ಲಿದ್ದ ಹುಲಿಗಳ ಹಾವಳಿಯಿಂದ ಜನ ಜೀವಭಯದಿಂದ ತತ್ತರಿಸುತ್ತಿದ್ದರು. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಮಿತಿಮೀರಿತ್ತು. ಇವೆಲ್ಲವನ್ನೂ ಯಶಸ್ವಿಯಾಗಿ ತಹಬಂದಿಗೆ ತಂದು ಕಾನೂನು ವ್ಯವಸ್ಥೆಯನ್ನು ಕಾಪಾಡುತ್ತಾರೆ ಹೀಗೆ ಇವರ ಆಡಳಿತದ ಚಿತ್ರಣ ಈ ಕೃತಿಯಲ್ಲಿ ನಾವು ಕಾಣಬಹುದು.
ಎಂ.ಜಿ. ರಂಗಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ 25 ,03,1962 ರಂದು ಜನಿಸಿದರು. ತಂದೆ ಆರ್. ಗುಡುವಯ್ಯ, ತಾಯಿ ಎಂ.ರಂಗಮ್ಮ. ಸ್ವಗ್ರಾಮ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಪೂರೈಸಿ, ಮೈಸೂರು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ, ಪದವಿ, ಮಾನಸ ಗಂಗೋತ್ರಿಯಲ್ಲಿ ಡಿಪ್ಲೋಮಾ-ಇನ್-ಇಂಗ್ಲಿಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದರು. ಮೂವತ್ತೈದು ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಶ್ರೀಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಮಾರ್ಚ್ 31, 2022 ರಂದು ನಿವೃತ್ತರಾಗಿದ್ದಾರೆ. ಇವರ ...
READ MORE