‘ಶಿಶುಕಂಡ ಕನಸು- ಕಿರಂ ನೆನಪು’ ಡಾ. ಟಿ.ಎನ್. ವಾಸುದೇವಮೂರ್ತಿ ಅವರು ಸಂಪಾದಿಸಿರುವ ಕೃತಿ. ಆತ್ಮನಿರ್ವಚನ, ನೆನೆಯುವ ಮುನ್ನ, ಡಿ.ಆರ್. ನಾಗರಾಜ್, ಯು.ಜಿ. ಕೃಷ್ಣಮೂರ್ತಿ, ಕಿರಂ ಮತ್ತು ಯುಜಿ, ಒಂದು ಪಿಎಚ್.ಡಿ ರಿಜಿಸ್ಟ್ರೇಷನ್ ಪ್ರಕರಣ, ಕೆಟ್ಟ ಕಳಂಕವನ್ನು ಹೊರಬೇಕಾದ ಒಂದು ಸಂದರ್ಭ, ಒಂದು ಅಪ್ಯಾಯಮಾನವಾದ ಮುಗುಳ್ನಗೆ, ಎಚ್.ಎಲ್. ನಾಗೇಗೌಡ, ಕಿರಂ ಹಾಗೂ ಬ್ರಾಹ್ಮಣ್ಯ, ಮಂಟೇದಿನ, ಕಿರಂ ಮತ್ತು ಅವರ ಶಿಷ್ಯರು, ವಿಮರ್ಶೆಯ ರೀತಿ ಹಾಗು ನೀತಿ, ಕಿರಂ ಮತ್ತು ಉಸಾಬರಿಗಳು, ಕಿರಂ ಹಾಗೂ ಅವರ ಕುಟುಂಬವರ್ಗ, ಕಿರಂ ಮತ್ತು ಕುಡಿತ ಸೇರಿದಂತೆ ಕಿರಂ ಜೊತೆಗೆ ಒಡನಾಟದಲ್ಲಿ ಕಂಡ ಅನೇಕ ವಿಶೇಷತೆಗಳನ್ನು ಇಲ್ಲಿ ದಾಖಲಿಸಿದ್ದಾರೆ
ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್ ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...
READ MORE