ವಾತ್ಸಲ್ಯ ಪಥದ ರೂವಾರಿ: ವ್ಯಾಸರಾಯ ಬಲ್ಲಾಳ

Author : ಜಿ.ಎನ್. ಉಪಾಧ್ಯ

Pages 152

₹ 150.00




Year of Publication: 2023
Published by: ಕನ್ನಡ ವಿಭಾಗ
Address: ಮುಂಬಯಿ ವಿಶ್ವವಿದ್ಯಾಲಯ, ಮುಂಬೈ
Phone: 9220212578

Synopsys

ವ್ಯಾಸರಾಯ ಬಲ್ಲಾಳರ ಬದುಕು ಬರಹಗಳನ್ನು ಪರಿಚಯಿಸುವ 'ವಾತ್ಸಲ್ಯ ಪಥದ ರೂವಾರಿ: ವ್ಯಾಸರಾಯ ಬಲ್ಲಾಳ' ಕೃತಿಯನ್ನು ಜಿ.ಎನ್. ಉಪಾಧ್ಯ ಅವರು ರಚಿಸಿದ್ದಾರೆ. ಕೃತಿಯ ಕುರಿತು ಬರೆದಿರುವ ಲೇಖಕ ಡಾ. ಬಿ. ಜನಾರ್ಧನ ಭಟ್ ಅವರು 'ಉಡುಪಿ ಮೂಲದ ವ್ಯಾಸರಾಯ ಬಲ್ಲಾಳರು ಮುಂಬಯಿಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಕನ್ನಡದ ಮುಖ್ಯ ಕಾದಂಬರಿಕಾರ ಮತ್ತು ಕತೆಗಾರ. ಅವರ ಬದುಕಿನ ಪಥ, ತಾತ್ವಿಕತೆ, ಅವರ ಹಲವು ಕೊಡುಗೆಗಳು ಮತ್ತು ಅವರ ಎಲ್ಲ ಸಾಹಿತ್ಯ ಕೃತಿಗಳ ಪರಿಚಯ ಮತ್ತು ಮೌಲ್ಯಮಾಪನ ಈ ಕೃತಿಯಲ್ಲಿ ಸಿಗುತ್ತದೆ' ಎಂದಿದ್ದಾರೆ.

ಹಾಗೇ ದೇಶದ ಮತ್ತು ಸಮಾಜದ ಚರಿತ್ರೆಯ ಒಳಸುಳಿಗಳನ್ನು ತಮ್ಮ ಕಾದಂಬರಿಗಳಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿರುವ ಬಲ್ಲಾಳರ ಮಹತ್ವವನ್ನು ಡಾ. ಉಪಾಧ್ಯರು ಇಲ್ಲಿ ವಿವರಿಸಿದ್ದಾರೆ. ವ್ಯಾಸರಾಯ ಬಲ್ಲಾಳರು ಮುಂಬಯಿಯಲ್ಲಿ ಕನ್ನಡ ಸಂಸ್ಕೃತಿ ಬೆಳೆಸಲು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ಸಂಘ ಇತ್ಯಾದಿಗಳ ಜತೆಗೆ ಗುರುತಿಸಿಕೊಂಡು ದುಡಿದವರೂ ಹೌದು ಎಂದು ಡಾ. ಉಪಾಧ್ಯರು ಗುರುತಿಸಿರುವುದು ಸಮೀಚೀನವಾಗಿದೆ. ಪ್ರಗತಿಶೀಲರಾಗಿದ್ದ ವ್ಯಾಸರಾಯ ಬಲ್ಲಾಳರು 'ನುಡಿ' ಎನ್ನುವ ಕನ್ನಡ ರಾಜಕೀಯ ಸಾಪ್ತಾಹಿಕದ ಸಹಸಂಪಾದಕರಾಗಿ ಕೂಡ ಕೆಲಸ ಮಾಡಿದ್ದರು. ಡಾ. ಜಿ. ಎನ್. ಉಪಾಧ್ಯ ಅವರು ರಚಿಸಿರುವ ಈ ಕೃತಿಯಲ್ಲಿ 8 ಅಧ್ಯಾಯಗಳಿವೆ. ಅನುಬಂಧದಲ್ಲಿ ಬಲ್ಲಾಳರ ಬದುಕಿನ ಪ್ರಮುಖ ಘಟನೆಗಳು, ಕೃತಿಗಳ ಪಟ್ಟಿ ಹಾಗೂ ಪೂರಕ ಚಿತ್ರಗಳಿವೆ. 150 ಪುಟಗಳ ಈ ಗ್ರಂಥ ಸಾಹಿತಿಗಳ ಸಮಗ್ರ ಕೊಡುಗೆಯನ್ನು ದಾಖಲಿಸುವ ಒಂದು ಅತ್ಯುತ್ತಮ ಮಾದರಿಯಾಗಿ ನಿಲ್ಲುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 

About the Author

ಜಿ.ಎನ್. ಉಪಾಧ್ಯ
(07 February 1967)

ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ  ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...

READ MORE

Related Books